‘ಸಂಸ್ಕೃತಿ ಹೆಸರಿನಲ್ಲಿ ಮೂಢನಂಬಿಕೆ ಪ್ರಸಾರ’

7

‘ಸಂಸ್ಕೃತಿ ಹೆಸರಿನಲ್ಲಿ ಮೂಢನಂಬಿಕೆ ಪ್ರಸಾರ’

Published:
Updated:

ನೆಲಮಂಗಲ: ‘ನಮ್ಮ ಸಂಸ್ಕೃತಿ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುವ ಕೆಲಸವನ್ನು ಪುರೋಹಿತಶಾಹಿಗಳು ಮಾಡುತ್ತಿದ್ದಾರೆ’ ಎಂದು ನಟ ಚೇತನ್‌ ಟೀಕಿಸಿದರು.

ನಗರೂರಿನ ಬಿಜಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಬೇಕು. ಅವರು ದುಷ್ಟಶಕ್ತಿಯ ಆಕರ್ಷಣೆಗೆ ಬಲಿಯಾಗದಂತೆ ತಡೆಯುವುದು ಇಂದಿನ ಶಿಕ್ಷಣದ ಆದ್ಯತೆಯಾಗಬೇಕು’ ಎಂದರು.

ಬಿಜಿಎಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌.ಶಿವರಾಮರೆಡ್ಡಿ, ‘ಭವಿಷ್ಯದಲ್ಲಿ ನಾವು ಯಾವ ದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯ ಪ್ರತಿನಿಧಿಗಳಾಗಿರಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !