ಟಾಟಾ ಪವರ್‌ನಲ್ಲಿ ಕೆಲಸ; ₹ 1.25 ಲಕ್ಷ ವಂಚನೆ
ಬೆಂಗಳೂರು: ಟಾಟಾ ಪವರ್ ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ಅಭ್ಯರ್ಥಿಯೊಬ್ಬರಿಂದ ₹ 1.25 ಲಕ್ಷ ಪಡೆದು ವಂಚಿಸಲಾಗಿದೆ.
‘ವಂಚನೆ ಬಗ್ಗೆ ವಿದ್ಯಾರಣ್ಯಪುರದ 36 ವರ್ಷದ ನಿವಾಸಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ’ ಎಂದು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಹೇಳಿದರು.
‘ದೂರುದಾರರಿಗೆ ಕರೆ ಮಾಡಿದ್ದ ವಂಚಕ, ಕೆಲಸದ ಆಮಿಷವೊಡ್ಡಿ ಕೆಲ ಶುಲ್ಕ ಪಾವತಿಸುವಂತೆ ಕೋರಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಖಾತೆಗೆ ಹಣ ಜಮೆ ಮಾಡಿದ್ದ. ನಂತರ ಆರೋಪಿ ನಾಪತ್ತೆಯಾಗಿದ್ದಾನೆ’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.