ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ಟೆಂಡರ್ ಕರೆಯಲು ಸಿದ್ಧತೆ

ಬಿಬಿಎಂಪಿ ವತಿಯಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆ
Last Updated 9 ಏಪ್ರಿಲ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ನೀರಿನ ಅಭಾವ ತೀವ್ರವಾಗಿರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಅಲ್ಪಾವಧಿಗೆ ಮರು ಟೆಂಡರ್‌ ಕರೆಯಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಜಿಪಿಎಸ್‌ ಅಳವಡಿಸಿರುವಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವ ಸಲುವಾಗಿ ವಾರದ ಹಿಂದೆ ಬಿಬಿಎಂಪಿ ಕರೆದಿದ್ದ ಟೆಂಡರ್‌ನಲ್ಲಿ ಯಾವುದೇ ಟ್ಯಾಂಕರ್‌ ಮಾಲೀಕರು ಭಾಗವಹಿಸಿರಲಿಲ್ಲ.

‘ಜನರಿಗೆ ಉಚಿತವಾಗಿ ನೀರು ಪೂರೈಸುವ ಉದ್ದೇಶದಿಂದ ನಾವು ಟೆಂಡರ್‌ ಕರೆದಾಗ ಯಾರೂ ಭಾಗವಹಿಸಿಲ್ಲ. ಟ್ಯಾಂಕರ್‌ ಮಾಲೀಕರಿಗೆ ಇನ್ನೊಂದು ಅವಕಾಶ ನೀಡುವ ಸಲುವಾಗಿ ಎಂಟೂ ವಲಯಗಳಲ್ಲೂ ಮರು ಟೆಂಡರ್‌ ಕರೆಯುತ್ತಿದ್ದೇವೆ. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡುತ್ತೇವೆ’ ಎಂದರು.

ಷರತ್ತು ಸಡಿಲ ಇಲ್ಲ: ’ಟ್ಯಾಂಕರ್‌ಗಳಲ್ಲಿ ಜಿಪಿಎಸ್‌ ಅಳವಡಿಸಿರಬೇಕು ಎಂಬ ಷರತ್ತನ್ನು ಸಡಿಲಿಸುವಂತೆ ವಾಹನ ಮಾಲೀಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ. ಹಳೆಯ ಟೆಂಡರ್‌ನಲ್ಲಿದ್ದ ಷರತ್ತುಗಳು ಹಾಗೆಯೇ ಮುಂದುವರಿಯಲಿವೆ. ಜಿಪಿಎಸ್‌ ಅಳವಡಿಸದ ವಾಹನಗಳಲ್ಲಿ ನೀರು ಪೂರೈಸಲು ಅವಕಾಶ ಕಲ್ಪಿಸಿದರೆ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಹಿತಿಯ ಕೊರತೆಯಿಂದಾಗಿ ಟ್ಯಾಂಕರ್‌ ಮಾಲೀಕರು ಟೆಂಡರ್‌ನಲ್ಲಿ ಭಾವಗಹಿಸಿಲ್ಲ ಎಂಬುದು ಸುಳ್ಳು. ಅನೇಕರು ಟೆಂಡರ್‌ ಬಗ್ಗೆ ನಮ್ಮಬಳಿ ವಿಚಾರಿಸಿದ್ದರು. ಪಾಲಿಕೆ ವತಿ ಯಿಂದಲೇ ಉಚಿತವಾಗಿ ನೀರು ಪೂರೈಕೆ ಆದರೆ, ಜನರಿಂದ ಮನಬಂದಂತೆ ದುಡ್ಡು ವಸೂಲಿ ಮಾಡಲು ಆಗುವುದಿಲ್ಲ. ನೀರಿನ ಹೆಸರಿನಲ್ಲಿ ನಡೆಯುತ್ತಿರುವ ದಂದೆಗೂ ಕಡಿವಾಣ ಬೀಳುತ್ತದೆ. ಹಾಗಾಗಿ ಅವರೆಲ್ಲ ಒಂದಾಗಿ
ಟೆಂಡರ್‌ ಪ್ರಕ್ರಿಯೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಬಾರಿ ಟ್ಯಾಂಕರ್‌ ಮಾಲೀ ಕರು ಟೆಂಡರ್‌ ಪ್ರಕ್ರಿಯೆಯಲ್ಲಿಭಾಗವ ಹಿಸುವ ನಿರೀಕ್ಷೆ ಇದೆ. ಒಂದು ವೇಳೆ ಭಾಗವಹಿಸದೇ ಇದ್ದರೆ, ನಮ್ಮ ಬಳಿಯೂ ಪರ್ಯಾಯ ಮಾರ್ಗಗಳಿವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT