ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯವು ಜಿಸ್ಕ್ ಟೆಕ್ನಾಲಜೀಸ್ ಹಾಗೂ ಹ್ಯಾಕ್ ಕಲ್ಚರ್ ಸಹಯೋಗದಲ್ಲಿ ಆಯೋಜಿಸಿದ್ದ ದಿ ಗ್ರೇಟ್ ಬೆಂಗಳೂರು ಹ್ಯಾಕಥಾನ್ ಯಶಸ್ವಿಯಾಗಿ ಪೂರ್ಣಗೊಂಡಿತು.

ಹ್ಯಾಕಥಾನ್ನಲ್ಲಿ 4,700ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. 150 ತಂಡಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ಇದರಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಆರು ತಂಡಗಳು ಮತ್ತು ಇತರೆ ಕಾಲೇಜಿನ 18 ತಂಡಗಳಿದ್ದವು.

ಸುರಕ್ಷಿತ ಮತ್ತು ಪರಿಣಾಮಕಾರಿ ಆನ್ಲೈನ್ ಪರೀಕ್ಷೆಗಳ ಅಗತ್ಯವನ್ನು ಪರಿಹರಿಸಲು ಆನ್ಲೈನ್ ಮೌಲ್ಯಮಾಪನ ಮಾಡಲು ಸಹಾಯವಾಗುವ (ಝೈಸ್ಕ್ ಟ್ರ್ಯಾಮಕ್), ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ಬಹುಭಾಷಾ ಸಂವಾದಾತ್ಮಕ ಸಲಹೆಗಾರರ ನೇಮಿಸುವುದು (ಸರ್ವಮ್ ಟ್ರ್ಯಾಕ್) ಹಾಗೂ ಯಾತ್ರಿ ಟ್ರ್ಯಾಕ್ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಜೆ. ಸೂರ್ಯಪ್ರಸಾದ್ ತಿಳಿಸಿದರು.

ಹ್ಯಾಕಥಾನ್ನ ವ್ಯವಸ್ಥಾಪಕಿ ಆರ್ಯಾ ಎ.ಐ., ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಎಸ್. ಶ್ರೀಧರ್, ವಿ. ಕೃಷ್ಣ, ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷೆ ಮಮತಾ ಎಚ್.ಆರ್., ಕರಣ್ ಎಂ.ವಿ., ತರುಣ್ ಮಲ್ಲಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.