ಬುಧವಾರ, ನವೆಂಬರ್ 25, 2020
18 °C

ಹನಿಟ್ರ್ಯಾಪ್‍ನಿಂದ ಶ್ರೀಮಂತರ ಸುಲಿಗೆ: ಗ್ಯಾಂಗ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹನಿಟ್ರ್ಯಾಪ್ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಸುಲಿಗೆ ಮಾಡುತ್ತಿದ್ದ ಏಳು ಆರೋಪಿಗಳ ತಂಡವನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಉದಯನಗರ ನಿವಾಸಿ ದೀಪಕ್ (26), ಶಕ್ತಿನಗರದ ಅಂಜಲಿ (31), ಉದಯನಗರದ ಟೈಸನ್ (23), ಪೈ ಲೇಔಟ್‍ನ ಪ್ರಕಾಶ್(20), ಪ್ರೇಮನಾಥ್ (32), ಉದಯನಗರದ ವಿನೋದ (43) ಹಾಗೂ ಕಮ್ಮನಹಳ್ಳಿಯ ಈಶ್ವರಿ (40) ಬಂಧಿತರು.

ಪೈ ಬಡಾವಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಈ ತಂಡ, ಶ್ರೀಮಂತರನ್ನು ಮನೆಗೆ ಆಹ್ವಾನಿಸಿ, ಹನಿಟ್ರ್ಯಾಪ್ ಮಾಡುತ್ತಿತ್ತು.

ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ 40 ಗ್ರಾಂ ಚಿನ್ನದ ಬ್ರೇಸ್‍ಲೆಟ್, 2 ಸ್ಮಾರ್ಟ್‍ಫೋನ್ ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು