ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಉಂಟು! ಮಗನ ಕಳ್ಳತನಕ್ಕೆ ತಂದೆಯಿಂದಲೇ ತರಬೇತಿ!

Last Updated 2 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 15 ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಬಂಧಿಸಿರುವ ಆರೋಪಿ ಇಮ್ರಾನ್ ಅಲಿಯಾಸ್ ಚೋರ್, ತಂದೆಯಿಂದ ತರಬೇತಿ ಪಡೆದು ಕೃತ್ಯ ಎಸಗುತ್ತಿದ್ದ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಇಮ್ರಾನ್‌ನನ್ನು ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬಂಧಿಸಲಾಗಿದೆ. ಈತ ನೀಡಿದ್ದ ಮಾಹಿತಿ ಆಧರಿಸಿ, ತಂದೆ ಏಜಾಜ್‌ ಖಾನ್‌ನನ್ನು ಬಂಧಿಸಲಾಗಿದೆ. ಇಬ್ಬರಿಂದಲೂ ₹ 65 ಲಕ್ಷ ಮೌಲ್ಯದ 1 ಕೆ.ಜಿ. 300 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಅಪರಾಧ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗುತ್ತಿದ್ದ ಏಜಾಜ್‌ ಖಾನ್, ಬಾತ್ಮಿದಾರನಾಗಿಯೂ ಮಾಹಿತಿ ನೀಡುತ್ತಿದ್ದ. ಪೊಲೀಸರ ತನಿಖಾ ವಿಧಾನ ತಿಳಿದಿದ್ದ ಏಜಾಜ್‌, ಕಳ್ಳತನ ಹೇಗೆ ಮಾಡಬೇಕೆಂದು ಮಗನಿಗೆ ಹೇಳುತ್ತಿದ್ದ. ಕಳ್ಳತನದ ನಂತರ ಪೊಲೀಸರಿಗೆ ಸಿಗದಂತೆ ಹೇಗೆ ಪರಾರಿಯಾಗಬೇಕು ಎಂಬುದನ್ನೂ ತಿಳಿಸುತ್ತಿದ್ದ. ತಂದೆ ನೀಡಿದ್ದ ತರಬೇತಿಯಿಂದಲೇ ನಗರದ 15 ಮನೆಗಳಲ್ಲಿ ಇಮ್ರಾನ್ ಕಳ್ಳತನ ಮಾಡಿದ್ದ.’

‘ಮಗನನ್ನು ಪೊಲೀಸರು ಹುಡುಕುತ್ತಿದ್ದ ಬಗ್ಗೆಯೂ ತಂದೆಗೆ ಮಾಹಿತಿ ಸಿಗುತ್ತಿತ್ತು. ಅದೇ ಮಾಹಿತಿಯನ್ನು ಮಗನಿಗೆ ರವಾನಿಸುತ್ತಿದ್ದ ತಂದೆ, ತಲೆ ಮರೆಸಿಕೊಂಡು ಓಡಾಡಲು ನೆರವಾಗುತ್ತಿದ್ದ. ಐಷಾರಾಮಿ ಹೋಟೆಲ್‌ನಲ್ಲಿ ಪೊಲೀಸರು ಶೋಧ ನಡೆಸುವುದು ಕಡಿಮೆ ಎಂಬುದನ್ನು ತಿಳಿದಿದ್ದ ತಂದೆ, ಅಂಥ ಹೋಟೆಲ್‌ನಲ್ಲಿ ಮಗನನ್ನು ಇರಿಸುತ್ತಿದ್ದ. ಹೀಗಾಗಿಯೇ ಆರೋಪಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ’ ಎಂದು ತಿಳಿಸಿವೆ.

‘ಕಳ್ಳತನ ನಡೆದಿದ್ದ ಮನೆಯಲ್ಲಿ ಸಿಕ್ಕ ಬೆರಳಚ್ಚು ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿ ಸುಳಿವು ಸಿಕ್ಕಿತ್ತು. ಅದರ ಮೂಲಕವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT