ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪ್ರತ್ಯೇಕ ಕಳವು ಪ್ರಕರಣ: ನಾಲ್ವರ ಬಂಧನ

Published 10 ಜುಲೈ 2024, 16:30 IST
Last Updated 10 ಜುಲೈ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೇವಸ್ಥಾನ ಹಾಗೂ ಈಜುಕೊಳದ ಬಳಿ ಚಿನ್ನಾಭರಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈಜುಕೊಳದ ವಸ್ತ್ರ ಬದಲಾಯಿಸುವ ಕೊಠಡಿಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ದೋಚಿದ್ದ ಈಜು ತರಬೇತುದಾರೆ ಹಾಗೂ ಕಳವು ಮಾಲು ಸ್ವೀಕರಿಸಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರ ನಿವಾಸಿ ಮಮತಾ(35) ಮತ್ತು ಕಳವು ಮಾಲು ಸ್ವೀಕರಿಸಿದ ಸ್ವಾಮಿ(45) ಬಂಧಿತರು. ‌

ಆರೋಪಿಗಳಿಂದ ₹ 3 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕೆಂಬತ್ತಹಳ್ಳಿಯಲ್ಲಿರುವ ಸ್ವಿಮ್ ಸ್ಕ್ವೇರ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಈಜು ಕಲಿಯಲು ಬಂದಿದ್ದ ಮಹಿಳೆಯೊಬ್ಬರು ವಸ್ತ್ರ ಬದಲಾಯಿಸುವ ಕೊಠಡಿಯಲ್ಲಿದ್ದ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟಿದ್ದರು. ಅದನ್ನು ಗಮನಿಸಿದ್ದ ಮಮತಾ ಚಿನ್ನಾಭರಣ ಕಳವು ಮಾಡಿ, ಪತಿಯ ಸ್ನೇಹಿತ ಸ್ವಾಮಿಗೆ ಕೊಟ್ಟು ಮಾರಾಟಕ್ಕೆ ಸೂಚಿಸಿದ್ದರು ಎಂದು ಪೊಲೀಸರು ಹೇಳಿದರು.

ದೇವಸ್ಥಾನದಲ್ಲಿ ಕಳವು ಇಬ್ಬರ ಬಂಧನ:
ಇನ್ನೊಂದು ಪ್ರಕರಣದಲ್ಲಿ ಮಾರುತಿನಗರದ ಕಬ್ಬಾಳಮ್ಮ ದೇವಿಯ ದೇವಸ್ಥಾನದಲ್ಲಿ ಬೆಳ್ಳಿಯ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಯಾರಬ್‌ನಗರ ನಿವಾಸಿಗಳಾದ ತೌಸಿಫ್(30) ಮತ್ತು ಜಮೀರ್(28) ಬಂಧಿತರು.

ಆರೋಪಿಗಳಿಂದ ₹3 ಲಕ್ಷ ಮೌಲ್ಯದ ದೇವಸ್ಥಾನದ ಪೂಜಾ ಸಾಮಗ್ರಿಗಳು ಹಾಗೂ ಐದು ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT