ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರು ಬುಕ್‌ ಮಾಡಿದ್ದ ಸಾಮಗ್ರಿಗೆ ಕನ್ನ: ಇಬ್ಬರ ಬಂಧನ

Published 28 ಜೂನ್ 2024, 15:40 IST
Last Updated 28 ಜೂನ್ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ಬುಕ್‌ ಮಾಡಿದ್ದ ಮೊಬೈಲ್‌ ಸೇರಿ ಬೆಲೆಬಾಳುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸದೇ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಬಾಧವ್‌ ಡೆಹೂರಿ ಹಾಗೂ ಭವಾನಿ ಶಂಕರ್‌ ಡೆಹೂರಿ ಬಂಧಿತರು.

‘ಬಂಧಿತರಿಂದ 18 ಮೊಬೈಲ್‌ ಫೋನ್‌ಗಳು, ಬೆಲೆಬಾಳುವ ವಾಚ್‌ಗಳು, ಇಯರ್‌ ಫೋನ್‌, ಇಯರ್ ಬಡ್ಸ್‌, ಹಾಗೂ ಎರಡು ಹಾರ್ಡ್ ಡಿಸ್ಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹10 ಲಕ್ಷವೆಂದು ಅಂದಾಜಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಠಾಣಾ ವ್ಯಾಪ್ತಿಯ ದೊಡ್ಡನೆಕ್ಕುಂದಿಯಲ್ಲಿ ಎನ್‌ಸಿಪಿಆರ್ ಕೈಗಾರಿಕಾ ಪ್ರದೇಶದಲ್ಲಿರುವ ಇನ್‌ಸ್ಟಾಕಾರ್ಟ್‌ ಕಂಪನಿಯ ವ್ಯವಸ್ಥಾಪಕರು ನೀಡಿದ ದೂರು ಆಧರಿಸಿ, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ತಂಡವು ಒಡಿಶಾಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ’ ಎಂದು ಪೊಲೀಸರು ಹೇಳಿದರು.

‘ಇನ್‌ಸ್ಟಾಕಾರ್ಟ್‌ನಲ್ಲಿ ಇಬ್ಬರು ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದರು. ಮೊಬೈಲ್‌ ಹಾಗೂ ಬೆಲೆಬಾಳುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವಂತೆ ಕಂಪನಿಯವರು ಸೂಚಿಸಿ ಕಳುಹಿಸುತ್ತಿದ್ದರು. ಆದರೆ, ಆರೋಪಿಗಳು ಗ್ರಾಹಕರಿಗೆ ತಲುಪಿಸದೇ ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT