ಮಂಗಳವಾರ, ಆಗಸ್ಟ್ 3, 2021
28 °C

ಟಿಪ್ಪು ಕಾಲದ ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಿಪ್ಪು ಕಾಲದ ಕನ್ನಡ ಶಿಲಾಶಾಸನವೊಂದು ಬೆಂಗಳೂರಿನ ಉತ್ತರ ತಾಲ್ಲೂಕಿನ ಕಾಳತಮ್ಮನಹಳ್ಳಿಯಲ್ಲಿ ಪತ್ತೆಯಾಗಿದೆ.

ಟಿಪ್ಪು ಸುಲ್ತಾನನ ಕಿಲ್ಲೇದಾರನಾಗಿದ್ದ ಬಹದ್ದೂರ್ ಖಾನನು ಹುತಾತ್ಮನಾದಾಗ, ನೀಡಲಾದ ದಾನ ಶಾಸನ ಇದಾಗಿದೆ. ಗ್ರಾಮದ ಅಶ್ವತ್ಥ ಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಹೂತುಹೋಗಿದ್ದ ಈ ಶಾಸನವನ್ನು ಇತಿಹಾಸ ಪ್ರೇಮಿಯೂ ಆದ ಬಿಎಂಟಿಸಿ ಚಾಲಕ ಕೆ.ಧನಪಾಲ್ ಅವರು ಶುಕ್ರವಾರ ಪತ್ತೆ ಹಚ್ಚಿದ್ದಾರೆ. 

ಬೆಂಗಳೂರಿನ ಮೇಲೆ 1791ರ ಮಾರ್ಚ್‌ನಲ್ಲಿ ಬ್ರಿಟಿಷರು ಆಕ್ರಮಣ ಮಾಡಿದಾಗ 21 ದಿನಗಳ ಕಾಲ ಕೋಟೆಯನ್ನು ರಕ್ಷಿಸಿದ ಬಹದ್ದೂರ್‌ ಖಾನನು ಅಂತಿಮವಾಗಿ ಹುತಾತ್ಮನಾದ. ಹೀಗೆ ಹುತಾತ್ಮನಾದ ಬಹದ್ದೂರ್ ಖಾನನಿಗೆ ಕಾಳತಮ್ಮನಹಳ್ಳಿ ಗ್ರಾಮವನ್ನು 1791ರ ಮಾರ್ಚ್‌ 27ರಂದು ರಕ್ತಕೊಡುಗೆಯಾಗಿ (ಹುತಾತ್ಮನಿಗೆ ಕೊಡುವ ದಾನ) ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖಿತವಾಗಿದೆ ಎಂದು ಇತಿಹಾಸ ಉಪನ್ಯಾಸಕ ಎಚ್‌.ಜಿ.ರಾಜೇಶ್‌ ತಿಳಿಸಿದ್ದಾರೆ.

ಈ ಶಿಲಾಶಾಸನದ ಪಾಠವನ್ನು ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್ ಮತ್ತು ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಓದಿಕೊಟ್ಟಿದ್ದಾರೆ. ಧನಪಾಲ್ ಅವರ ಜೊತೆಗೆ ಶಾಸನವನ್ನು ಶೋಧಿಸಿದವರಲ್ಲಿ ಸಂಶೋಧನಾ ವಿದ್ಯಾರ್ಥಿ ಆರ್‌. ಯುವರಾಜ್ ಸಹ ಇದ್ದರು. ಶಾಸನವನ್ನು ಹೊರತೆಗೆಯಲು ಗ್ರಾಮಸ್ಥರಾದ ಜಯರಾಮಯ್ಯ, ನರಸಿಂಹಮೂರ್ತಿ, ನಾಗೇಶ್, ಶ್ರೀನಿವಾಸ್ ನೆರವಾದರೆಂದು ಧನಪಾಲ್ ಸ್ಮರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು