ಬೆಂಗಳೂರು: ಸರ್ಕಾರದ ಸಮ್ಮತಿ ಪಡೆಯದೆ ಶೇಕಡ 7.5ರಷ್ಟು ಟೋಲ್ ಹೆಚ್ಚಿಸಿರುವ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ಗೆ (ನೈಸ್) ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

1994ರಲ್ಲಿ ಆಗಿರುವ ಒಪ್ಪಂದದಂತೆ, ಸರ್ಕಾರದ ಸಮ್ಮತಿ ಇಲ್ಲದೆ ಟೋಲ್ ಹೆಚ್ಚಳ ಮಾಡುವಂತಿಲ್ಲ ಎಂದು ಲೋಕೋಪಯೋಗಿ ಇಲಾಖೆ ನೋಟಿಸ್ನಲ್ಲಿ ತಿಳಿಸಿದೆ. ‘ಈ ರೀತಿಯ ಯಾವುದೇ ನೋಟಿಸ್ ಬಂದಿಲ್ಲ, ಒಪ್ಪಂದದಂತೆಯೇ ಟೋಲ್ ಹೆಚ್ಚಿಸಲಾಗಿದೆ’ ಎಂದು ನೈಸ್ ಸಂಸ್ಥೆ ಹೇಳಿದೆ.

44 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಮತ್ತು ಲಿಂಕ್ ರಸ್ತೆಯಲ್ಲಿ ಜುಲೈ 1ರಿಂದ ಟೋಲ್ ದರವನ್ನು ಅನ್ನು ನೈಸ್ ಸಂಸ್ಥೆಯು ಶೇ 7.5ರಷ್ಟು ಹೆಚ್ಚಿಸಿತ್ತು. ಕಾರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಇದು ದುಬಾರಿ ಎನಿಸಿದೆ.

‘ಟೋಲ್ ಹೆಚ್ಚಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಒಪ್ಪಂದದ ಪ್ರಕಾರ ಟೋಲ್ ಹೆಚ್ಚಿಸುವ ಮುನ್ನ ಸರ್ಕಾರದ ಸಮ್ಮತಿ ಪಡೆಯಬೇಕಿದೆ’ ಎಂದು ಲೋಕೋಪಯೋಗಿ ಇಲಾಖೆ ಉಪ ಕಾರ್ಯದರ್ಶಿ ಎನ್. ಪಾರ್ವತಿ ಅವರು ಜುಲೈ 8ರಂದು ನೀಡಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.

‘1994ರ ಒಪ್ಪಂದಂತೆ ಪ್ರತಿ ವರ್ಷ ಶೇ 10ರಷ್ಟು ಟೋಲ್ ಹೆಚ್ಚಿಸುವುದಕ್ಕೆ ಅವಕಾಶವಿದೆ. ನಾವು ಅದಕ್ಕಿಂತ ಕಡಿಮೆಯೇ ಹೆಚ್ಚಿಸಿದ್ದೇವೆ’ ಎಂದು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.