ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಪತ್ತೆಗೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಸಂಚಾರ ಪೊಲೀಸರು, ಆರು ದಿನಗಳಲ್ಲಿ ₹2.35 ಕೋಟಿ ದಂಡ ಸಂಗ್ರಹಿಸಿದ್ದಾರೆ.

‘ಸೆ. 20ರಿಂದ 26ರವರೆಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ 55,717 ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಂಟಿ ಕಮಿಷನರ್ (ಸಂಚಾರ) ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

‘ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ನೇರವಾಗಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಈ ಹಿಂದೆ ಕೈಬಿಡಲಾಗಿತ್ತು. ಇದೀಗ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಾಲಕರನ್ನು ತಡೆದು ತಪಾಸಣೆ ಮಾಡಿ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ’ ಎಂದೂ ತಿಳಿಸಿದರು.

ಪ್ರಮುಖ ಸಂಚಾರ ನಿಯಮ ಉಲ್ಲಂಘನೆ

ಉಲ್ಲಂಘನೆ;ಪ್ರಕರಣ;ಸಂಗ್ರಹಿಸಿದ ದಂಡ (ಲಕ್ಷಗಳಲ್ಲಿ)

ಹೆಲ್ಮೆಟ್‌ರಹಿತ ಚಾಲನೆ; 18,319; ₹ 68.39

ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು; 11,606; ₹43.58

ಸಿಗ್ನಲ್ ಜಂಪ್; 5,967; ₹ 21.33

ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಲುಗಡೆ; 1,177; ₹ 11.24

ಚಾಲನೆ ವೇಳೆ ಮೊಬೈಲ್ ಬಳಕೆ; 1,620; ₹ 11.10

ಸೀಟ್ ಬೆಲ್ಟ್ ಹಾಕದಿರುವುದು; 2,228; ₹ 10.33

ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ; 2,684; ₹ 10.18

ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ; 715; ₹6.91

ದೋಷಪೂರಿತ ನೋಂದಣಿ ಸಂಖ್ಯೆ ಫಲಕ; 1,662; ₹6.01

ಅತೀ ವೇಗದ ಚಾಲನೆ; 336; ₹3.36

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ;171; ₹1.66

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.