ವೃಕ್ಷ ತಪಾಸಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಸಾಕಷ್ಟು ಅರ್ಜಿಗಳು ಬಂದಿವೆ. ತಜ್ಞರ ಸಮಿತಿ ಅರ್ಹರನ್ನು ಆಯ್ಕೆ ಮಾಡಲಿದ್ದು ತರಬೇತಿ ನಂತರ ನಿಯೋಜಿಸಲಾಗುತ್ತದೆ.
– ಸುದರ್ಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು
ಹೇಗಿರಲಿದೆ ಕಾರ್ಯ?
ಬಿಎಸ್ಸಿ ಅರಣ್ಯಶಾಸ್ತ್ರ ಇಲ್ಲವೇ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದವರು ಜೈವಿಕ ವಿಜ್ಞಾನದಲ್ಲಿ ಪದವಿ ಪಡೆದವರು ವೃಕ್ಷ ತಪಾಸಕರಾಗಿ ಅರಣ್ಯ ಇಲಾಖೆ ಸೇರಲಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ತೆರಳಿ ಮರಗಳ ಸಮೀಕ್ಷೆ ನಡೆಸಲಿದ್ದಾರೆ. ಬೀಳುವ ಹಂತದಲ್ಲಿರುವ ಮರಗಳು ಕೊಂಬೆಗಳ ಮಾಹಿತಿಯನ್ನು ಕಲೆಹಾಕಿ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಲಿದ್ದಾರೆ. ಇದಾದ ಬಳಿಕ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಇಲ್ಲವೇ ರೆಂಬೆಗಳನ್ನು ಕಾಲಮಿತಿ ಒಳಗೆ ತೆಗೆಯಲಾಗುತ್ತದೆ.