ಸೋಮವಾರ, ಸೆಪ್ಟೆಂಬರ್ 16, 2019
23 °C

ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ

Published:
Updated:
Prajavani

ದಾಬಸ್ ಪೇಟೆ: ರಾಷ್ಟ್ರೀಯ ಹೆದ್ದಾರಿ 4ರ ಕುಲಹವನಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ಲಾರಿಯೊಂದು ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸರಕುಗಳು ರಸ್ತೆಗೆ ಬಿದ್ದು, ಸಂಚಾರ ದಟ್ಟಣೆ ಉಂಟಾಯಿತು. 

ಬಟ್ಟೆ ತಯಾರಿಸುವ ಕಚ್ಚಾ ವಸ್ತುಗಳಿದ್ದ ಲಾರಿ ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಮಳೆ ಬರುತ್ತಿದ್ದರಿಂದ ಚಾಲಕನಿಗೆ ವಿಭಜಕ ಸರಿಯಾಗಿ ಕಾಣದಿರುವುದು ಅವಘಡಕ್ಕೆ ಕಾರಣವಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

ಕಚ್ಚಾ ವಸ್ತುಗಳು ರಸ್ತೆಗೆ  ಬಿದ್ದುದರಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ಕಿ.ಮೀ.ಗಟ್ಟಲೇ ವಾಹನಗಳು ನಿಂತಿದ್ದವು. ನೆಲಮಂಗಲದ ಸಂಚಾರ ಪೊಲೀಸರು ಬಂದು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

Post Comments (+)