ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಓಂತರ ಕಲಾ ಕುಟೀರದಲ್ಲಿ ಭಾರತೀಯ ಕಲೆ, ಸಂಸ್ಕೃತಿ ಅನಾವರಣ

Published 28 ಜುಲೈ 2023, 15:45 IST
Last Updated 28 ಜುಲೈ 2023, 15:45 IST
ಅಕ್ಷರ ಗಾತ್ರ

ಬೆಂಗಳೂರು: ಓಂತರ ಕಲಾ ಕುಟೀರದಲ್ಲಿ ಇತ್ತೀಚೆಗೆ ನಡೆದ ‘ನಾವು ನಮ್ಮವರು–2023’ ಕಾರ್ಯಕ್ರಮದಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಗಳು ಅನಾವರಣಗೊಂಡವು.

ಸಾಂಪ್ರದಾಯಿಕ ವಾಚನ, ಭಾವಪೂರ್ಣ ಗಾಯನ, ಸಮ್ಮೋಹನಗೊಳಿಸುವ ನೃತ್ಯಗಳು 1,000ಕ್ಕೂ ಅಧಿಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. 200ಕ್ಕೂ ಅಧಿಕ ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಬೆಳಿಗ್ಗಿನಿಂದ ಸಂಜೆವರೆಗೆ ಪ್ರದರ್ಶಿಸಿದರು.

ಭರತನಾಟ್ಯ, ಕಲರಿಪಯಟ್ಟು, ಕೂಚಿಪುಡಿ, ಕಥಕ್ ಮುಂತಾದ ಶಾಸ್ತ್ರೀಯ ನೃತ್ಯ ಪ್ರಕಾರಗಳು ಗಮನಸೆಳೆದವು. ಜಗ್ಲಿಂಗ್, ಫಿಲ್ಮಿ ಹಾಡುಗಳು, ಮೋನೋ-ಆಕ್ಟಿಂಗ್ ಮತ್ತು ಇತರ ಪ್ರದರ್ಶನಗಳು ಮನಸೂರೆಗೊಂಡವು. ಗ್ರ್ಯಾಂಡ್ ಫಿನಾಲೆಯಲ್ಲಿ ಫ್ಯಾಷನ್ ಶೋ, ರೋಮಾಂಚಕ ಬೆಲ್ಲಿ ಡ್ಯಾನ್ಸ್ ಸಾಂಸ್ಕೃತಿಕ ಹಬ್ಬಕ್ಕೆ ಮೆರುಗು ನೀಡಿದವು.

ತಾರಾ ಎಂಟರ್‌ಟೈನ್‌ಮೆಂಟ್‌ನ ಸಹಯೋಗದಲ್ಲಿ ಓಂತರ ಕಲಾ ಕುಟೀರ ಪ್ರಸ್ತುತಪಡಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂತರ ಕಲಾ ಕುಟೀರದ ಸಹ ಸಂಸ್ಥಾಪಕಿ ಜಯಲಕ್ಷ್ಮೀ ಅನಂತರಾಮ್‌ ವಹಿಸಿದ್ದರು. ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ನಟ ಶ್ರೀನಾಥ್‌ ಭಾಗವಹಿಸಿದ್ದರು. ಕಲಾ ನಿರ್ದೇಶಕ ಸೈಯದ್‌ ಸಲ್ಲಾವುದ್ದೀನ್‌ ಪಾಷಾ ಅವರನ್ನು ಸನ್ಮಾನಿಸಲಾಯಿತು. ‘ನಾವು ನಮ್ಮವರು’ ತಂಡದ ಬೃಂದಲಾ ಅನಂತರಾಮ್‌ ಮತ್ತು ಅಂಜಲಿ ಸಂತೋಷ್‌ ಕಾರ್ಯಕ್ರಮ ನಡೆಸಿಕೊಟ್ಟರು.

ಹೊಸ ವರ್ಷಕ್ಕೆ ಕಾರ್ಯಕ್ರಮ: ‘ನಾವು ನಮ್ಮವರು– 2024’ ಕಾರ್ಯಕ್ರಮವು ಈ ವರ್ಷದ ಡಿಸೆಂಬರ್‌ 31 ಮತ್ತು 2024ರ ಜನವರಿ 1ರಂದು ನಡೆಯಲಿದೆ. ವಿಭಿನ್ನ ಆಹಾರ, ವಿಶಿಷ್ಟ ಸಂಗೀತ, ನೃತ್ಯ, ವಿವಿಧ ಆಟಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಟಿಕೆಟ್‌ಗಳು ಲಭ್ಯ. https://allevents. in/bangalore/naavu-nammavaru- 2024/80003523917370?ref=smdl ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT