ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಕ್‌ ದಳವಿ ವಿರುದ್ಧ ಕ್ರಮಕ್ಕೆ ಆಗ್ರಹ

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಆಗ್ರಹ
Last Updated 3 ಜೂನ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ, ಬೀದರ್‌, ಕಾರವಾರ, ಭಾಲ್ಕಿ ಮತ್ತು ನಿಪ್ಪಾಣಿಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಧರಣಿ ನಡೆಸಿರುವ ಎಂಎಎಸ್‌ನ(ಮಹಾರಾಷ್ಟ್ರ ಏಕೀಕರಣ ಸಮಿತಿ) ದೀಪಕ್ ದಳವಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಆಗ್ರಹಿಸಿದ್ದಾರೆ.

ಎಂಇಎಸ್ ನಾಯಕರು ಎಂದು‌ ಹೇಳಿಕೊಳ್ಳುವವರು ಬೆಳಗಾವಿಯಲ್ಲಿ ಇತ್ತೀಚೆಗೆ ಧರಣಿನಡೆಸಿರುವುದು ದುರದೃಷ್ಟಕರ. ಬೆಳಗಾವಿ, ಬೀದರ್ ಸೇರಿದಂತೆ ಮೇಲ್ಕಂಡ ಎಲ್ಲ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಪ್ರದೇಶಗಳಾಗಿವೆ. ಇವುಗಳು ಕರ್ನಾಟಕ ರಾಜ್ಯದಲ್ಲಿ ಉಳಿದಿರುವ ಬಗ್ಗೆ ಯಾವುದೇ ರೀತಿಯ ಗೊಂದಲ ಇರುವುದಿಲ್ಲ. ಆದಾಗ್ಯೂ ದೀಪಕ್‌ ದಳವಿಯವರು ತಮ್ಮ ಸಹಚರರೊಂದಿಗೆ ಅನಗತ್ಯವಾಗಿ ಈ ಬಗ್ಗೆ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಬೆದರಿಕೆ ಒಡ್ಡಿರುವುದು ಕ್ಷಮಾರ್ಹವಲ್ಲ ಎಂದವರು ತಿಳಿಸಿದ್ದಾರೆ.

ಒಂದು ವೇಳೆ ಬೆಳಗಾವಿ ಮಹಾರಾಷ್ಟಕ್ಕೆ ಸೇರದಿದ್ದಲ್ಲಿ ಜಿಲ್ಲಾಡಳಿವು ಸ್ಥಗಿತಗೊಳ್ಳುವಂತೆ ಧರಣಿ ನಡೆಸುತ್ತೇವೆಂಬ ಗೊಡ್ಡು ಬೆದರಿಕೆಗೆ ಜಿಲ್ಲಾಡಳಿತವಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಪರಸ್ಪರ ಸ್ನೇಹದಿಂದ ಇರುವಾಗ ಆಗಾಗ್ಗೆ ಇಂತಹ ಅನಗತ್ಯ ತಗಾದೆಗಳನ್ನು ಹುಟ್ಟು ಹಾಕಿ ಇಲ್ಲಿನ ಜನರ ನಡುವಣ ಸಹಬಾಳ್ವೆಯನ್ನು ಕದಡಲು ಮುಂದಾಗಿರುವ ದಳವಿ ಅಂತಹವರ ವರ್ತನೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೋಮಶೇಖರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT