ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಆಗ್ರಹ

Published 21 ಜೂನ್ 2023, 21:07 IST
Last Updated 21 ಜೂನ್ 2023, 21:07 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಮತ್ತು ಸರ್ಕಾರಿ ರಂಗಗಳಲ್ಲಿ ಕನ್ನಡಿಗರ ಔದ್ಯೋಗಿಕ ನೆಲೆಗಟ್ಟನ್ನು ಗಟ್ಟಿಗೊಳಿಸಲು ಡಾ.ಸರೋಜಿನಿ ಮಹಿಷಿ ವರದಿಗೆ ಕಾನೂನು ಬಲ ನೀಡಬೇಕು ಎಂದು ಕನ್ನಡ ಅನುಷ್ಠಾನ ಮಂಡಳಿ ಆಗ್ರಹಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಆರ್.ಎ. ಪ್ರಸಾದ್, ‘ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಮೇಳಗಳಿಂದ ಕನ್ನಡ ಕನ್ನಡಿಗನ ಬದುಕು ಪೂರ್ಣವಾಗುವುದಿಲ್ಲ. ಕನ್ನಡದ ಕ್ರಿಯಾತ್ಮಕ ಕಾರ್ಯ ಕನ್ನಡಿಗರ ಉದ್ಯೋಗದ ಹಕ್ಕಿನ ಕಾನೂನು ಜಾರಿಗೊಳಿಸಿದರೆ ಮಾತ್ರ ಕನ್ನಡಿಗರ ಅಭಿವೃದ್ಧಿ ಸಾಧ್ಯ. ಕೇವಲ ಜಾತ್ರೆ, ಜಯಂತಿ ಮತ್ತು ಉತ್ಸವಗಳ ಇಲಾಖೆಯಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಪ್ರತ್ಯೇಕಿಸಿ ಕನ್ನಡ ನಿರ್ದೇಶನಾಲಯ ಸ್ಥಾಪಿಸಲು ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಸಮಗ್ರ ಕನ್ನಡ ಅಭಿವೃದ್ಧಿ ಹಾಗೂ ಕನ್ನಡ ಅನುಷ್ಠಾನ ವಿಫಲಗೊಳಿಸುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕನ್ನಡ ಮತ್ತು ಕನ್ನಡಿಗರ ಸಮಗ್ರ ಅಭಿವೃದ್ಧಿಗೆ 2023ರ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ₹100 ಕೋಟಿ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಜಾಗೃತಿ ಟ್ರಸ್ಟ್‌ನ ಮುಖ್ಯಸ್ಥ ನಾಗೇಶ್, ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿಯ ಕಾರ್ಯದರ್ಶಿ ಭಾರತಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT