ಸೋಮವಾರ, ಜನವರಿ 17, 2022
21 °C

ಇನ್ನೂ 5 ಮಾರ್ಗಗಳಲ್ಲಿ ವಜ್ರ ಬಸ್‌ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಜ.3ರಿಂದ ಹೆಚ್ಚುವರಿಯಾಗಿ ಐದು ಮಾರ್ಗಗಳಲ್ಲಿ ‘ವಜ್ರ’ ಹವಾನಿಯಂತ್ರಿತ ಬಸ್‌ಗಳ ಸೇವೆಯನ್ನು ಬಿಎಂಟಿಸಿ ಆರಂಭಿಸಲಿದೆ.

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಕೆಂಪೇಗೌಡ ಬಸ್‌ ನಿಲ್ದಾಣದಿಂದ ಜನಪ್ರಿಯ ಟೌನ್‌ಶಿಪ್‌, ಕಾವೇರಿ ಭವನದಿಂದ ಡಿ.ಕ್ರಾಸ್‌ಗೆ (ದೊಡ್ಡಬಳ್ಳಾಪುರ), ಕೆಂಪೇಗೌಡ ಬಸ್‌ ನಿಲ್ದಾಣದಿಂದ ವೈಟ್‌ಫೀಲ್ಡ್‌ ಟಿಟಿಎಂಸಿ, ಹೆಬ್ಬಾಳದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗಿನ ಮಾರ್ಗಗಳಲ್ಲಿ ಈ ಸೇವೆ ಆರಂಭಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕಾಡುಗೋಡಿ ಬಸ್‌ ನಿಲ್ದಾಣದವರೆಗೆ ಮತ್ತು ಬನಶಂಕರಿ ಟಿಟಿಎಂಸಿಯಿಂದ ಐಟಿಪಿಎಲ್‌ವರೆಗೆ ಹವಾನಿಯಂತ್ರಿತ ಸಾರಿಗೆ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು