ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಎಸ್‌ಐ ಜೊತೆ ಅಸಭ್ಯ ವರ್ತನೆ; ವಶಕ್ಕೆ

Last Updated 16 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಅವರಿಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ರಾಮಕೃಷ್ಣ ಅಲಿಯಾಸ್ ರಾಮು ಎಂಬಾತನನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಂದಿನಿ ಲೇಔಟ್ ನಿವಾಸಿಯಾದ ಆರೋಪಿ ವಿರುದ್ಧ ಎಸ್‌ಐ ಅವರು ದೂರು ನೀಡಿದ್ದರು. ಆತನ ವಿರುದ್ಧ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಹಾಗೂ ಜೀವಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಗೃಹರಕ್ಷಕಿಯೊಬ್ಬರ ಕುಮ್ಮಕ್ಕಿನಿಂದ ಆರೋಪಿ ಕೃತ್ಯ ಎಸಗಿದ್ದ. ಗೃಹರಕ್ಷಕಿಯನ್ನೂ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿದರು.

ಹೆಚ್ಚಿನ ಕೆಲಸ ಹೇಳಿದ್ದಕ್ಕೆ ಕೃತ್ಯ: ‘ಪಿಎಸ್‌ಐ ಕೆಲಸ ಮಾಡುವ ಠಾಣೆಯಲ್ಲೇ ಗೃಹರಕ್ಷಕಿ ಕೆಲಸ ಮಾಡುತ್ತಿದ್ದಳು. ಹೆಚ್ಚು ಕೆಲಸ ಹೇಳಿದರೆಂದ ಕಾರಣಕ್ಕೆ ಎಸ್‌ಐ ಮೇಲೆ ಕೋಪಗೊಂಡಿದ್ದಳು. ಅದೇ ವಿಷಯವನ್ನು ತನ್ನ ಸ್ನೇಹಿತನಾದ ಆರೋಪಿ ರಾಮುಗೆ ಹೇಳಿದ್ದಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇದೇ 7ರಂದು ರಾತ್ರಿ ಎಸ್‌ಐಗೆ ಕರೆ ಮಾಡಿದ್ದ ಆರೋಪಿ, ಅಶ್ಲೀಲವಾಗಿ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. 26 ನಗ್ನ ಫೋಟೊಗಳನ್ನೂ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ. ₹ 1 ಲಕ್ಷಕ್ಕೆ ಬೇಡಿಕೆ ಇಟ್ಟು ಜೀವಬೆದರಿಕೆ ಹಾಕಿದ್ದ. ಅದಾದ ಮರುದಿನದಿಂದಲೇ ಆರೋಪಿ ತಲೆಮರೆಸಿಕೊಂಡಿದ್ದ.’

‘ಗೃಹರಕ್ಷಕಿ ಹೆಸರಿನಲ್ಲಿ ಖರೀದಿಸಿದ್ದ ಸಿಮ್‌ ಕಾರ್ಡ್‌ನಿಂದಲೇ ಆರೋಪಿ ಕರೆ ಮಾಡಿದ್ದ. ಅದೇ ಸುಳಿವಿನಿಂದ ಆತ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT