ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಶುಲ್ಕ: ಡಿಜಿಟಲ್ ಪಾವತಿ ಮುಂದುವರಿಕೆ

Last Updated 21 ಏಪ್ರಿಲ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಮಾರ್ಗಗಳ ಮೂಲಕವೂ ನೀರಿನ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಿದ್ದ ಜಲಮಂಡಳಿ, ಈ ಸೌಲಭ್ಯ ಮುಂದುವರಿಸಿದೆ.

ಮಂಡಳಿಯ ಕಿಯೋಸ್ಕ್‌ ಗಳಲ್ಲಿ ಚೆಕ್‌ ಅಥವಾ ಡಿಡಿ ಮೂಲಕವೂ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಚೆಕ್‌ಗಳು ಹೆಚ್ಚಿನ ಬ್ಯಾಂಕುಗಳಲ್ಲಿ ತಿರಸ್ಕೃತವಾಗುತ್ತಿದ್ದುದರಿಂದ ಮಂಡಳಿ ಡಿಜಿಟಲ್‌ ಪಾವತಿಗೆ ಅವಕಾಶ ನೀಡಿದೆ.

ಚೆಕ್‌ ಅಥವಾ ಡಿಡಿ ಬದಲಿಗೆ ಮಂಡಳಿಯ ಕಿಯೋಸ್ಕ್‌ಗಳಲ್ಲಿ ನಗದು ಮೂಲಕ ಮಾತ್ರ ಶುಲ್ಕ ಸ್ವೀಕರಿಸಲಾಗುತ್ತದೆ. ಅಲ್ಲದೆ, ಬಿಬಿಪಿಎಸ್, ಪೇಟಿಎಂ, ಭೀಮ್, ಅಮೇಜಾನ್, ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು ಎಂದು ಮಂಡಳಿ ಹೇಳಿದೆ.

ಮಂಡಳಿಯ ಜಾಲತಾಣ www.bwssb.gov.in ಗೆ ಲಾಗಿನ್ ಆಗಿಯೂ ಶುಲ್ಕ ಪಾವತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT