‘ಆರೋಪಿ ಮಾರಿಸ್, ಪತ್ನಿ ಲೀಡಿಯಾ ಜೊತೆ ಆಗಾಗ ಜಗಳ ತೆಗೆಯುತ್ತಿದ್ದ. ಸಣ್ಣಪುಟ್ಟ ವಿಷಯಕ್ಕೂ ಹಲ್ಲೆ ಮಾಡುತ್ತಿದ್ದ. ಗುರುವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದರು. ಇದೇ ವೇಳೆ ಮನೆಯಲ್ಲಿದ್ದ ದಂಪತಿ ನಡುವೆ ಜಗಳ ಶುರುವಾಗಿತ್ತು. ಸಿಟ್ಟಾದ ಮಾರಿಸ್, ಡಂಬಲ್ಸ್ನಿಂದ ಲೀಡಿಯಾ ತಲೆಗೆ ಹೊಡೆದಿದ್ದ’ ಎಂದು ಪೊಲೀಸರು ಹೇಳಿದರು.