ಗುರುವಾರ , ಜನವರಿ 21, 2021
18 °C

ಪುರುಷನಾಗಿ ಬದಲಾದ 20 ವರ್ಷದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೈಂಗಿಕ ಬೆಳವಣಿಗೆಯಲ್ಲಿ ಸಮಸ್ಯೆ (ಡಿಎಸ್‌ಡಿ) ಎದುರಿಸುತ್ತಿದ್ದ 20 ವರ್ಷದ ಯುವತಿಯೊಬ್ಬರಿಗೆ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರಿಂದಾಗಿ ಯುವತಿ ಈಗ ಯುವಕನಾಗಿ ಬದಲಾಗಿದ್ದಾರೆ.

‘10ನೇ ವರ್ಷದಿಂದಲೇ ‌ಅವರ ಶರೀರದಲ್ಲಿ ಏರುಪೇರುಗಳು ಕಾಣಿಸಿಕೊಂಡಿದ್ದವು. ಈಗ ಆ ಸಮಸ್ಯೆ ಗಂಭೀರ ಸ್ವರೂಪದ ಪಡೆದ ಕಾರಣ ಅವರು ಆಸ್ಪತ್ರೆಗೆ ಬಂದು, ತಪಾಸಣೆಗೆ ಒಳಪಟ್ಟಿದ್ದರು. ಪರೀಕ್ಷಿಸಿದಾಗ ಶರೀರದಲ್ಲಿ ಪುರುಷ ಸ್ವರೂಪದ ಲೈಂಗಿಕ ಬೆಳವಣಿಗೆಗಳು ಕಂಡುಬಂದವು. ಪುರುಷನನ್ನು ಮಹಿಳೆಯಾಗಿ ಲಿಂಗ ಬದಲಾಯಿಸುವುದು ಸುಲಭ. ಆದರೆ, ಮಹಿಳೆಯನ್ನು ಪುರುಷನನ್ನಾಗಿ ಮಾಡುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ಸಹ ಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು’ ಎಂದು ಆಸ್ಪತ್ರೆಯ ಡಾ. ಮೋಹನ್ ಕೇಶವಮೂರ್ತಿ ತಿಳಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.