ಮಂಗಳವಾರ, ಏಪ್ರಿಲ್ 7, 2020
19 °C
ವಿಶ್ವ ತಾಯ್ನುಡಿ ದಿನಾಚರಣೆ

ಭಾಷಾ ಸಮಾನತೆಯಿಂದ ದೇಶ ಬಲಿಷ್ಠ: ಆನಂದ್‌ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಹು ಭಾಷೆಗಳನ್ನು ಹೊಂದಿರುವ ದೇಶದಲ್ಲಿ ಭಾಷಾ ಅಸಮಾನತೆ ತಾಂಡವವಾಡುತ್ತಿದೆ. ಇದನ್ನು ನಿವಾರಿಸಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಿದರೆ ದೇಶವು ಇನ್ನಷ್ಟು ಬಲಿಷ್ಠವಾಗಬಲ್ಲುದು’ ಎಂದು ಕನ್ನಡ ಪರ ಹೋರಾಟಗಾರ ಆನಂದ್‌ ಅಭಿಪ್ರಾಯಪಟ್ಟರು.

ವಿಶ್ವ ತಾಯ್ನುಡಿ ದಿನದ ಅಂಗವಾಗಿ ಬನವಾಸಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾಷಾ ಸಮಾನತೆಗಾಗಿ ನಡೆದ ಹೋರಾಟ ಹತ್ತಿಕ್ಕಲು 1952ರಲ್ಲಿ ಢಾಕಾದಲ್ಲಿ ನಡೆದ ಗೋಲಿಬಾರ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳು ಅಸುನೀಗಿದರು. ಅವರ ಬಲಿದಾನದ ಸ್ಮರಣಾರ್ಥ ಯುನೆಸ್ಕೊ 2000ದಿಂದ ಫೆ.21ರಂದು ವಿಶ್ವ ತಾಯ್ನುಡಿ ದಿನವನ್ನು ಆಚರಿಸುತ್ತಾ ಬರುತ್ತಿದೆ. ’ ಎಂದರು.

‘ಪಾಕಿಸ್ತಾನದಲ್ಲಿ 1948ರಲ್ಲಿ ಉರ್ದುವನ್ನು ರಾಷ್ಟ್ರ ಭಾಷೆಯೆಂದು ಘೋಷಿಸಲಾಯಿತು. ಬಂಗಾಳಿ ಭಾಷೆ ಬಳಸುತ್ತಿದ್ದ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾ) ಇದಕ್ಕೆ ಪ್ರತಿರೋಧ ವ್ಯಕ್ತವಾಯಿತು. ಕಲಿಕೆಯಲ್ಲಿ ಹಾಗೂ ನೋಟುಗಳಲ್ಲಿ ಬಂಗಾಳಿ ಭಾಷೆಗೂ ಮಾನ್ಯತೆ ಸಿಗಬೇಕು ಎಂಬ ಒತ್ತಾಯ ಕೇಳಿಬಂತು. ವಿದ್ಯಾವಂತ ಬಂಗಾಳಿಗಳು ಉದ್ಯೋಗ ವಂಚಿತರಾಗುತ್ತಾರೆ ಎಂಬ ಕೂಗೆದ್ದಿತು. ಇದು ಭಾಷಾ ಆಧಾರದಲ್ಲಿ ಪಾಕಿಸ್ತಾನ ವಿಭಜನೆ ಹೊಂದುವುದಕ್ಕೆ ನಾಂದಿ ಹಾಡಿತು’ ಎಂದು ಅವರು ವಿವರಿಸಿದರು.

‘ಹಿಂದಿ ಹೇರಿಕೆಯಿಂದ ಬಾಂಗ್ಲಾ ಎದುರಿಸಿದಂತಹ ಪರಿಸ್ಥಿತಿಯನ್ನೇ ಭಾರತದ ಭಾಷೆಗಳೂ ಎದುರಿಸುತ್ತಿವೆ. ಹಿಂದಿ ಹೇರಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಲಿದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು