ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಜಲ ದಿನ, ಪ್ರಜಾವಾಣಿ@75 ಸಂಭ್ರಮ: ನೀರಿಗಾಗಿ ನಡೆದವರ ನುಡಿ

Last Updated 1 ಏಪ್ರಿಲ್ 2023, 20:04 IST
ಅಕ್ಷರ ಗಾತ್ರ

ನೀರನ್ನು ಮಿತವಾಗಿ ಬಳಸುವುದರ ಜೊತೆಗೆ ಮುಂದಿನ ಪೀಳಿಗೆಗಾಗಿ ಉಳಿಸಬೇಕು. ಇತ್ತೀಚಿನ ದಿನಗಳಲ್ಲಿ ಜಲಮೂಲಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ಜಲಚರಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ಆದ್ದರಿಂದ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳವುದರ ಕುರಿತು ಜಾಗೃತಿ ಅವಶ್ಯಕತೆ ಇದೆ.

ಲಾವಣ್ಯ, ಎನ್‌ಸಿಸಿ ಕೆಡೆಟ್‌

***

ಅಂತರ್ಜಲ ಸಂರಕ್ಷಣೆ, ಜಲ ಮರುಪೂರಣ ಸೇರಿ ಜಲ ಸಂರಕ್ಷಣೆಯ ವಿವಿಧ ವಿಧಾನಗಳ ಕುರಿತು ಜಾಗೃತಿ ಮೂಡಿಸಬೇಕು. ಬಳಸಿದ ನೀರನ್ನು ಪುನರ್ಬಳಕೆಗೆ ಯೋಗ್ಯಗೊಳಿಸುವ ವಿಧಾನಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಮಂಗಳಂ, ಗೃಹಿಣಿ

***

ಸಿಹಿ ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲಿನ್ಯ, ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚು–ಹೆಚ್ಚು ಅರಿವು ಮೂಡಿಸಬೇಕಾಗಿದೆ. ಜಲಸಂರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸಬೇಕು.

ಸಂಜನಾ, ಮಡಿವಾಳ

***

ಪ್ರತಿನಿತ್ಯ ನೀರನ್ನು ಮಿತವಾಗಿ ಬಳಸಬೇಕು. ಜೀವಜಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಳಿಗೆ ಅದು ಉಳಿಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.

ಪ್ರತೀಕ್ಷಾ, ವಿದ್ಯಾರ್ಥಿನಿ, ಬಸವೇಶ್ವರನಗರ

***

ಶುದ್ಧ (ಆರ್‌ಒ) ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಹೇಳಿದೆ. ಆದ್ದರಿಂದ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರನ್ನೇ ಕುಡಿಯಬೇಕು. ಜಲಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದಷ್ಟೇ ಅಲ್ಲ, ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಜ್ಯೋತಿಷ್‌ ಕುಮಾರ್, ಮಡಿವಾಳ

***

ದೇಶದಲ್ಲಿ ನದಿಗಳ ಜೋಡಣೆ ಮಾಡುವುದರ ಮೂಲಕ ಜಲಸಂರಕ್ಷಣೆ ಕೆಲಸ ನಡೆಯುತ್ತಿದೆ. ಮನುಷ್ಯರು, ಪ್ರಾಣಿಗಳು, ಕೃಷಿ ಸೇರಿ ಎಲ್ಲದಕ್ಕೂ ನೀರಿನ ಅವಶ್ಯಕತೆ ಇದೆ. ನೀರಿಲ್ಲದೇ ಏನೂ ಇಲ್ಲ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು.

ನಿತಿನ್ ಭೂಷಣ್ ಕೆ.ಎನ್.,

***

ಪಾತ್ರೆ ತೊಳೆಯುವುದು, ಮುಖ ತೊಳೆಯುವುದಕ್ಕೆ ಮತ್ತು ಸ್ನಾನ ಮಾಡುವುದಕ್ಕೆ ಸಾಕಷ್ಟು ನೀರನ್ನು ವ್ಯಯ ಮಾಡಲಾಗುತ್ತಿದೆ. ನೀರಿನ ಸಂಗ್ರಹಣೆ ಮೂಲಗಳು, ಸಂಗ್ರಹಿಸಿದ ನೀರಿನ ಸೂಕ್ತ ಉಪಯೋಗ ಹಾಗೂ ನೀರಿನ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಲಿದೆ.

ಚಂದ್ರಶೇಖರ್, ನಿವೃತ್ತ ಸೈನಿಕ

***

ಪ್ರಕೃತಿ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಜೀವಜಲ ಪ್ರಮುಖವಾದದ್ದು, ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮಾನವ ಸಂಕುಲಕ್ಕೆ ಅವಶ್ಯಕ ಹಾಗೂ ಅನಿವಾರ್ಯ.

ಮದನ್ ಮೋಹನ್ ಆರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT