ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ಕೋವಿಡ್‌ ನಿಯಂತ್ರಣ ಕೊಠಡಿ ಆರಂಭ

Last Updated 27 ಏಪ್ರಿಲ್ 2021, 3:11 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು ಯಲಹಂಕ ವಲಯದಲ್ಲಿ ಕೋವಿಡ್ ನಿಯಂತ್ರಣ ಕೊಠಡಿ ಆರಂಭಿಸಿದೆ. ಎನ್.ಇ‌.ಎಸ್ ವೃತ್ತದ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಈ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ.

ಕೋವಿಡ್‌ ಕುರಿತ ಸೇವೆಗಳಿಗಾಗಿ ಸಾರ್ವಜನಿಕರು ಈ ನಿಯಂತ್ರಣ ಕೊಠಡಿಯನ್ನು (ಸಹಾಯವಾಣಿ: 080-61972844 ಅಥವಾ 1912) ಸಂಪರ್ಕಿಸಬಹುದು.

‘ಕೊರೊನಾ ಸೋಂಕಿತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ, ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗುವುದಾದರೆ ಮಾಡಿಕೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ, ಔಷಧಿಯ ಕುರಿತು, ಆಸ್ಪತ್ರೆಗೆ ಕೋವಿಡ್ -19 ಸೋಂಕಿತರನ್ನು ದಾಖಲಿಸಲು ಅಂಬ್ಯುಲೆನ್ಸ್ ವ್ಯವಸ್ಥೆ, ಕೋವಿಡ್‌ನಿಂದ ಸತ್ತವರ ಮೃತದೇಹ ಸಾಗಿಸುವ ವಾಹನ ವ್ಯವಸ್ಥೆ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ನೆರವು ಪಡೆಯಲು ಈ ನಿಯಂತ್ರಣ ಕೊಠಡಿ ಬಳಸಿಕೊಳ್ಳಬಹುದು’ ಎಂದು ವಲಯ ಆಯುಕ್ತ ಡಿ.ರಂದೀಪ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT