ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಲಸಿಕೆ ಶಿಬಿರಕ್ಕೆ ಚಾಲನೆ

Last Updated 18 ಜೂನ್ 2021, 4:44 IST
ಅಕ್ಷರ ಗಾತ್ರ

ಯಲಹಂಕ: ಸೈಟ್‌ಕೇರ್‌ ಆಸ್ಪತ್ರೆಯ ಸಹಯೋಗದೊಂದಿಗೆ ಗ್ಯಾಲರಿಯಾ ಮಾಲ್‌ನ ವತಿಯಿಂದ ಸ್ಥಳೀಯರು ಹಾಗೂ ನೌಕರರಿಗೆ ಉಚಿತವಾಗಿ ಲಸಿಕೆ ನೀಡುವ ಶಿಬಿರಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.

‘ಕೋವಿಡ್‌ ತಡೆಗಟ್ಟುವಲ್ಲಿ ಲಸಿಕೆ ನೀಡುವುದೊಂದೇ ಮಾರ್ಗ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರವು ಲಸಿಕೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆದರೆ ಖಾಸಗಿ ಸಂಸ್ಥೆಗಳೂ ಸಹ ಶೆ.25ರಷ್ಟು ಲಸಿಕೆ ಖರೀದಿಸಿ, ತಮ್ಮ ನೌಕರರು, ಸಿಬ್ಬಂದಿಗೆ ನೀಡುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಗ್ಯಾಲರಿಯಾ ಮಾಲ್‌ನ ವ್ಯವಸ್ಥಾಪಕರು, ನೌಕರರು ಹಾಗೂ ಸ್ಥಳೀಯರಿಗೆ ಉಚಿತವಾಗಿ ಲಸಿಕೆ ನೀಡುವ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ’ ಎಂದರು.

‘ಯಲಹಂಕದಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಜೂನ್ 21ರಿಂದ 18ವರ್ಷ ಮೇಲ್ಪಟ್ಟವರಿಗೆ ವ್ಯವಸ್ಥಿತವಾಗಿ ಲಸಿಕೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ 21ರಂದು ಎನ್‌ಆರ್‌ಐ ಸಂಸ್ಥೆಯೊಂದು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 2,500 ಲಸಿಕೆ ನೀಡಲಿದ್ದು, ಇದನ್ನು ಕ್ಷೇತ್ರದ ಬಿಪಿಎಲ್ ಕಾರ್ಡ್‌ ಹೊಂದಿರುವ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನೀಡಲಾಗುವುದು’ ಎಂದರು.

ಗ್ಯಾಲರಿಯಾ ಮಾಲ್‌ನ ಮಾಲೀಕ ಬಿ.ಎಸ್.ಸುರೇಂದರ್, ‘ಕೊರೊನಾ ಸೋಂಕು ಹರಡುವ ಭಯದಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಿದೆ. ಈ ದಿಸೆಯಲ್ಲಿ ಸಾರ್ವಜನಿಕರು ವಾಹನದಲ್ಲಿ ಮನೆಯಿಂದ ನೇರವಾಗಿ ಇಲ್ಲಿಗೆ ಬಂದಿಳಿದ ತಕ್ಷಣ ಲಸಿಕೆ ಹಾಕಿಸಿಕೊಂಡು 30 ನಿಮಿಷ ವಿಶ್ರಾಂತಿ ಪಡೆದ ಬಳಿಕ ಮನೆಗೆತೆರಳಲು ಅವಕಾಶ ಕಲ್ಪಿಸಲಾಗಿದೆ. ಜೂನ್ 20ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಶಿಬಿರ ನಡೆಯಲಿದೆ’ ಎಂದು ತಿಳಿಸಿದರು.

ಬ್ರೂಕ್‌ಫೀಲ್ಡ್‌ ಪ್ರಾಪರ್ಟೀಸ್‌ನ ಪರಾಗ್, ಪಾಲಿಕೆ ಮಾಜಿ ಸದಸ್ಯ ಎಂ.ಸತೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT