ಬೆಂಗಳೂರು: ‘ಆಡಳಿತದ ವಿವಿಧ ಮಜಲುಗಳ ಬಗ್ಗೆ ಅರಿಯಲು ಹಾಗೂ ನಾಗರಿಕರ ಜವಾಬ್ದಾರಿ ಹೆಚ್ಚಿಸಲು ‘ಯೂತ್ ಕ್ಯಾನ್ ಲೀಡ್' ಅಭಿಯಾನ ಸಹಕಾರಿ. ಇಂತಹ ಅಭಿಯಾನಗಳು ಹೆಚ್ಚಾಗಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಆರಂಭಿಸಿರುವ ಈ ಅಭಿಯಾನದ ಕುರಿತು ಅವರು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಎರಡು ತಿಂಗಳ ಈ ಕಾರ್ಯಕ್ರಮದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಆಡಳಿತ ಯಂತ್ರದ ಹಲವು ಮಜಲುಗಳು, ನೀತಿನಿರೂಪಣೆಯ ವಿಧಾನ, ಸರ್ಕಾರಿ ಯೋಜನೆಗಳ ಕುರಿತಾದ ಸರ್ವೆ ಸೇರಿದಂತೆ ಹಲವು ಮಾಹಿತಿಯನ್ನು ತಜ್ಞರಿಂದ ಒದಗಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲಿವೆ’ ಎಂದು ತಿಳಿಸಿದರು.
ಕನ್ನಡಪ್ರಭ ಸಂಪಾದಕ ರವಿ ಹೆಗಡೆ ‘ಇಂತಹ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಲು ಸಾಧ್ಯ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.