ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿ.ಪಂ. ಸದಸ್ಯ

7
ಮಾಚೋಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿ.ಪಂ. ಸದಸ್ಯ

Published:
Updated:
Deccan Herald

ಬೆಂಗಳೂರು: ಮಾಚೋಹಳ್ಳಿ ಸರ್ವೆ ನಂ 88ರಲ್ಲಿ 26 ಗುಂಟೆ ಸರ್ಕಾರಿ ಶಾಲಾ ಜಾಗ ಒತ್ತುವರಿಯಾಗಿರುವುದನ್ನು ತೆರವು ಮಾಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಉದ್ದಂಡಯ್ಯ ಅವರು ದಾಸನಪುರ ಹೋಬಳಿ ಮಾಚೋಹಳ್ಳಿ ಗ್ರಾಮಸಭೆಯಲ್ಲಿ ಕೋರಿದರು. 

ಸರ್ಕಾರಿ ಶಾಲಾ ಜಾಗವು 1.26 ಎಕರೆ ಇದೆ. ಇದರಲ್ಲಿ 26 ಗುಂಟೆ ಒತ್ತುವರಿ ಆಗಿದೆ. ಅಧಿಕಾರಿಗಳು ಸುಮ್ಮನಿರುವುದು ಸಲ್ಲದು ಎಂದು ತರಾಟೆಗೆ ತೆಗೆದುಕೊಂಡರು. 

‘1975ರಲ್ಲಿ ಗ್ರಾಮದ ಸರ್ವೆ ನಂ 78ರಲ್ಲಿ 5.28 ಎಕರೆ ಮತ್ತು ಸರ್ವೆ ನಂ 88ರಲ್ಲಿ 33.26 ಎಕರೆ ಜಾಗ ಗುರುತಿಸಿ ಜನರಿಗೆ ಮನೆ ಕಟ್ಟಿಕೊಳ್ಳಲು ನೀಡಲಾಗಿತ್ತು. ಆದರೆ, ಅವರಿಗೆ ನೀಡಲಾದ ಹಕ್ಕು ಪತ್ರದ ಮೇಲೆ ಖಾತೆಯಾಗುತ್ತಿಲ್ಲ. ಮನೆಗಳನ್ನು ಕಟ್ಟಿಕೊಂಡಿರುವ ಬಡವರು ಈಗ ಎಲ್ಲಿಗೆ ಹೋಗಬೇಕು? ಅವರು ಬಳಿ ಇರುವ ದಾಖಲೆಗಳನ್ನು ನೋಡಿ ಖಾತೆ ಮಾಡಿಕೊಡಿ’ ಎಂದು ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ರೆಡ್ಡಿ ಮಾತನಾಡಿ, ‘1975ರಲ್ಲಿ ಗ್ರಾಮ ಪಂಚಾಯಿತಿ ಇರಲಿಲ್ಲ. ಈಗ ಈ ಎರಡು ಸರ್ವೆ ನಂಬರ್‌ನಲ್ಲಿ ಇದನ್ನು ಗೋಮಾಳ ಜಾಗ ಎಂದು ದಾಖಲೆ ತೋರಿಸುತ್ತಿದೆ. ತಾಲ್ಲೂಕು ಪಂಚಾಯಿತಿಯುಲ್ಲಿ ಹಕ್ಕು ಪತ್ರ ಗಳನ್ನು ವಿತರಣೆ ಮಾಡಿದ ಬಗ್ಗೆ ದಾಖಲೆಗಳೇ ಇಲ್ಲ. ಖಾತೆಗಳನ್ನು ಹೇಗೆ ಮಾಡಿಕೊಡುವುದು? ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ಮಾಡಿ ಖಾತೆಗಳನ್ನು ಮಾಡಬೇಕು’ ಎಂದರು.

ಗ್ರಾಮಸ್ಥರು ಕಾನೂನಿನ ಅಡಿಯಲ್ಲಿ ಖಾತೆಯನ್ನು ಮಾಡಿಕೊಡುವಂತೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !