ದಿನದಿಂದ ದಿನಕ್ಕೆ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ. 2017–18 ರ ಒಂದೇ ವರ್ಷದಲ್ಲಿ 1,97,330 ವೈಮಾನಿಕ ಸಂಚಾರ ನಡೆದಿದೆ. ಈಗ ದೇಶ– ವಿದೇಶಗಳ 67 ಸ್ಥಳಗಳಿಗೆ ವಿಮಾನಗಳು ಹೋಗುತ್ತವೆ. 46 ದೇಶಿಯ ಮತ್ತು 21 ಅಂತರರಾಷ್ಟ್ರೀಯ ಸ್ಥಳಗಳಿಗೆ ವಿಮಾನಗಳು ಹೋಗುತ್ತಿವೆ. ಒಟ್ಟು 44 ವಿಮಾನ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.