ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ.ಅನಿಲ್ ಕುಮಾರ್ ಪರ ಅಂಬೇಡ್ಕರ್ ಮೊಮ್ಮಗ ಆನಂದ್ ಅಂಬೇಡ್ಕರ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸೋಮವಾರ ಪ್ರಚಾರ ನಡೆಸಿದರು.

ತೆರೆದ ವಾಹನದಲ್ಲಿ ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯಗಳಲ್ಲಿ ಸಂಚರಿಸಿ ಮತಯಾಚಿಸಿದರು.

ಆನಂದ್ ಅಂಬೇಡ್ಕರ್, ‘ಭ್ರಷ್ಟಾಚಾರ ಮತ್ತು ಕೋಮುವಾದಿಂದ ರಾಜ್ಯ ಮುಕ್ತ ಆಗಬೇಕು. ಆದಕಾರಣ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವ ಶಕ್ತಿಯಿರುವ ಅನಿಲ್ ಕುಮಾರ್‌ಗೆ ಬೆಂಬಲಿಸುತ್ತಿದ್ದೇನೆ’ ಎಂದರು.

‘ಬಡತನದಲ್ಲಿ ಹುಟ್ಟಿ ಉತ್ತಮ ಸ್ಥಾನದಲ್ಲಿರುವ ಅನಿಲ್ ಕುಮಾರ್ ಅವರು ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಾಸಕರಾದರೆ, ಬಡವರ ಸೇವೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಇವರಿಗೆ ಜನ ಬೆಂಬಲಿಸಬೇಕು’ ಎಂದು ಹರ್ಷಿಕಾ ಪೂಣಚ್ಚ ಹೇಳಿದರು.

ಅಭ್ಯರ್ಥಿಯ ರೋಡ್ ಷೋನಿಂದಾಗಿ ಹೊಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ವಾಹನ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.