ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟಿಪ್ಪರ್‌ ಹಗರಣ ತನಿಖೆಗೆ ಆಗ್ರಹ

Last Updated 17 ಮೇ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಆಟೊ ಟಿಪ್ಪರ್‌ಗಳ ಹೆಸರಿನಲ್ಲಿ ನಡೆದಿರುವಅವ್ಯವಹಾರ ಕುರಿತು ತನಿಖೆ ನಡೆಸಬೇಕೆಂದುಆಮ್ಮ್‌ ಆದ್ಮಿ ಪಕ್ಷ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ನಗರದ 198 ವಾರ್ಡ್‌ಗಳಲ್ಲಿಕಸ ಸಂಗ್ರಹ ಮತ್ತು ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೊದಂತೆ ಒಟ್ಟು 4,466 ಆಟೊಗಳು ಅಗತ್ಯವಿದೆ. ಸದ್ಯ 2,580 ಆಟೊಗಳು ಕೆಲಸ ಮಾಡುತ್ತಿರುವ ದಾಖಲೆಗಳಿವೆ’ ಎಂದರು.

‘ಒಂದು ಆಟೊ ಟಿಪ್ಪರ್‌ಗೆ ಪ್ರತಿ ತಿಂಗಳು ₹57 ಸಾವಿರ ವ್ಯಯ ಮಾಡಲಾಗುತ್ತಿದ್ದು, 1,230 ಆಟೊ ಟಿಪ್ಪರ್‌ಗಳಿಗೆ ತಗಲುವ ವೆಚ್ಚ ₹80 ಕೋಟಿ. ಆದರೆ, ದಾಖಲೆಯಲ್ಲಿರುವ 2,580 ಆಟೊ ಟಿಪ್ಪರ್‌ಗಳಿಗೆ ವರ್ಷಕ್ಕೆ ಸುಮಾರು ₹176.5 ಕೋಟಿ ನೀಡಲಾಗುತ್ತದೆ. ಆದರೆ, ಕೆಲಸ ಮಾಡದ 1350 ಆಟೊ ಟಿಪ್ಪರ್‌ಗಳ ಹೆಸರಿನಲ್ಲಿ ಸುಳ್ಳು ಲೆಕ್ಕ ಪತ್ರಗಳನ್ನು ಸೃಷ್ಟಿಸಿ ಗುತ್ತಿಗೆದಾರರು ಕೋಟ್ಯಂತರ ಹಣ ದೋಚುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT