ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಹೆಲಿಕಾಪ್ಟರ್ ವಿಭಾಗದ ಆವರಣದಲ್ಲಿ ಉದ್ಯೋಗಿ ವಿಜಯ್ ಕುಮಾರ್ (40) ಎಂಬುವರು ಸೋಮವಾರ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ವಿಜಯ್, ಪತ್ನಿ ಹಾಗೂ ಮಗನ ಜತೆಗೆ ಬನ್ನೇರುಘಟ್ಟದಲ್ಲಿ ವಾಸವಾಗಿದ್ದರು. ಪರಿಚಿತರ ಬಳಿ ಸಾಲ ಮಾಡಿದ್ದ ಅವರು ಆ ಹಣವನ್ನು ಆಸ್ತಿ ಖರೀದಿಸಲು ಬಳಸಿದ್ದರು. ಇತ್ತೀಚೆಗೆ ಸಾಲಗಾರರ ಒತ್ತಡ ಹೆಚ್ಚಾಗಿತ್ತು.