ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ, ಉಬರ್‌ ವಿರುದ್ಧ ಫೆ.15ಕ್ಕೆ ಖಾಸಗಿ ವಾಹನ ಚಾಲಕರ ಪ್ರತಿಭಟನೆ

Last Updated 22 ಜನವರಿ 2017, 19:59 IST
ಅಕ್ಷರ ಗಾತ್ರ
ಬೆಂಗಳೂರು: ಓಲಾ ಮತ್ತು ಉಬರ್‌ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, ಖಾಸಗಿ ವಾಹನಗಳ ಚಾಲಕ ಸಂಘಟನೆಗಳ ಒಕ್ಕೂಟ ಫೆ.15 ರಂದು  ಸಾರಿಗೆ ಆಯುಕ್ತರ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಿದೆ.
 
ಆಲ್‌ ಇಂಡಿಯಾ ರೋಡ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್ ಫೆಡರೇಷನ್‌, ನಗರದ ವಿವಿಧ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳ ಪದಾಧಿಕಾರಿಗಳ ದುಂಡು ಮೇಜಿನ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಒಕ್ಕೂಟದ ಸಂಚಾಲಕ ಬಿ.ವಿ.ರಾಘವೇಂದ್ರ ಅವರು ತಿಳಿಸಿದ್ದಾರೆ.
 
ಹವಾನಿಯಂತ್ರಿತವಲ್ಲದ ವಾಹನಗಳಿಗೆ ಕಿ.ಮೀ.ಗೆ ₹14.50 ಮತ್ತು ಹವಾನಿಯಂತ್ರಿತ ವಾಹನಗಳಿಗೆ ಕಿ.ಮೀ.ಗೆ  ₹19.50  ದರವನ್ನು ಸರ್ಕಾರವೇ ನಿಗದಿ ಮಾಡಿದೆ. ಆದರೆ, ಓಲಾ, ಉಬರ್‌ ಸಂಸ್ಥೆಗಳು ಇದಕ್ಕಿಂತ ಕಡಿಮೆ ದರದಲ್ಲಿ ಬಾಡಿಗೆಗೆ ವಾಹನಗಳನ್ನು ಓಡಿಸುತ್ತಿವೆ. ಪರ್ಮಿಟ್‌ ಇಲ್ಲದೆ ವಾಹನಗಳನ್ನು ಓಡಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ   ಕಣ್ಣು ಮುಚ್ಚಿ ಕುಳಿತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT