ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಫಲಿತಾಂಶ ಪ್ರಕಟಿಸದ ಆಡಳಿತ ಮಂಡಳಿ
Last Updated 4 ಮಾರ್ಚ್ 2015, 20:06 IST
ಅಕ್ಷರ ಗಾತ್ರ

ಯಲಹಂಕ: ಪರೀಕ್ಷೆ ಬರೆದು ಒಂದು ವರ್ಷ ಕಳೆದರೂ ಫಲಿತಾಂಶ ಪ್ರಕಟಿಸದ ಆಡಳಿತ ಮಂಡಳಿ ಕ್ರಮವನ್ನು ವಿರೋ-ಧಿಸಿ, ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ  ರಾಮಗೊಂಡನಹಳ್ಳಿಯ ರಾಮ-ಕೃಷ್ಣ ಆಯುರ್ವೇದಿಕ್‌ ವೈದ್ಯ-ಕೀಯ ಕಾಲೇಜಿನ ಆವರಣದಲ್ಲಿ ಬುಧ-ವಾರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು 2013–14ನೇ ಬ್ಯಾಚ್‌ನ ಬಿಎಎಂಎಸ್‌ ವಿಷಯದ ಪರೀಕ್ಷೆ ಬರೆದಿದ್ದರು. ಆ ಸಂದರ್ಭದಲ್ಲಿ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದಿಂದ ಕಾಲೇಜಿಗೆ ಅನುಮತಿ ಸಿಕ್ಕಿರಲಿಲ್ಲ. ಆದರೂ, ಆಡಳಿತ ಮಂಡಳಿಯು ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸಿತ್ತು. ಹೀಗಾಗಿ, ವಿಶ್ವವಿದ್ಯಾಲಯವು ಆಡಳಿತ ಮಂಡಳಿಯ ಮೇಲೆ ದೂರು ದಾಖಲಿಸಿ, ಫಲಿತಾಂಶವನ್ನು ತಡೆಹಿಡಿಯಲಾಗಿತ್ತು ಎನ್ನಲಾಗಿದೆ.
‘ಎರಡು ತಿಂಗಳ ಹಿಂದೆಯೇ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಇದುವರೆಗೂ ಫಲಿತಾಂಶ ಪ್ರಕಟ-ವಾ-ಗಿಲ್ಲ. ಮಾರ್ಚ್‌ 17 ಕ್ಕೆ ಮತ್ತೆ ಪೂರಕ ಪರೀಕ್ಷೆ ಆರಂಭವಾಗಲಿದ್ದು, ಯಾವ ವಿಷ-ಯ-ದಲ್ಲಿ ಉತ್ತೀರ್ಣ ಅಥವಾ ಯಾವುದು ಅನುತ್ತೀರ್ಣ ಎಂಬುದು ಗೊತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.

‘ವರ್ಷಪೂರ್ತಿ ಓದಿದರೂ ಐದು ವಿಷಯಗಳ ಪರೀಕ್ಷೆ ಬರೆಯಲು ಕಷ್ಟ. ಈಗ ಫಲಿತಾಂಶ ಪ್ರಕಟವಾದರೂ ಅನು-ತ್ತೀರ್ಣವಾಗಿರುವ ವಿಷಯಗಳಿಗೆ ಓದಬೇಕೊ ಅಥವಾ ಮುಂದಿನ ಸೆಮಿ-ಸ್ಟರ್‌ನ ವಿಷಯಗಳಿಗೆ ಓದಬೇಕೊ ಎಂಬ ಗೊಂದಲದಲ್ಲಿದ್ದೇವೆ’ ಎಂದು ವಿದ್ಯಾರ್ಥಿಗಳು ದೂರಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿ-ಸಿದ ಪ್ರಾಂಶುಪಾಲ ಶೇಷ ಸಾಯಿ ಅವರು, ‘ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದ್ದು, ಆದೇಶದ ಪ್ರತಿ-ಯನ್ನು ರಾಜೀವ್‌ಗಾಂಧಿ ವಿಶ್ವ ವಿದ್ಯಾಲ-ಯಕ್ಕೆ ಸಲ್ಲಿಸಲಾಗಿದೆ. ಎರಡು ದಿನಗಳೊ-ಳಗಾಗಿ ಫಲಿತಾಂಶ ಪ್ರಕಟವಾಗಲಿದೆ’ ಎಂದು ತಿಳಿಸಿದರು. ಪಟ್ಟುಬಿಡದ ವಿದ್ಯಾರ್ಥಿಗಳು ಸಂಜೆ 5ರವರೆಗೂ ಪ್ರತಿಭಟನೆಯನ್ನು ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT