ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸ್ಲ್ಯಾಬ್; ಅಧಿಕಾರಿಗಳ ಸುಳಿವಿಲ್ಲ

Last Updated 12 ಜೂನ್ 2019, 19:45 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆ ಮತ್ತು ಮೈಕೊ ಬಡಾವಣೆ ಮಧ್ಯ ಹಾದು ಹೋಗಿರುವ ಮಳೆ
ನೀರು ಕಾಲುವೆಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ಬಿದ್ದು ತಿಂಗಳಾದರೂ ಅಧಿಕಾರಿಗಳ ಸುಳಿವಿಲ್ಲ. ಬಿಬಿಎಂಪಿಯ ಕಾರ್ಯವೈಖರಿಗೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯನ್ನೇ ಮಳೆನೀರು ಕಾಲುವೆಯಾಗಿ ಮಾಡಿರುವುದರಿಂದ ಚಪ್ಪಡಿ ಕಲ್ಲುಗಳಿಂದ ಮುಚ್ಚಿರುವ ಸ್ಲ್ಯಾಬ್ ಕುಸಿದುಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ರಾತ್ರಿ ವೇಳೆ ಹಾಗೂ ಮಳೆ ಬಂದಾಗ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ನಿವಾಸಿಗಳು ಹೇಳಿದರು.

2005ರಲ್ಲಿ ನೆರೆ ಸಂಭವಿಸಿ ಇಡೀ ಪ್ರದೇಶ ಮುಳುಗಡೆಯಾಗಿತ್ತು. ಆಗ ನೆರೆತಪ್ಪಿಸಲು ರಸ್ತೆಯಲ್ಲೇ ಮಳೆ ನೀರು ಕಾಲುವೆ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿತ್ತು.

ಬಿಬಿಎಂಪಿಯ ಸಹಾಯಕ ಎಂಜಿನಿಯರ್ ವನರಾಜು ಪ್ರತಿಕ್ರಿಯಿಸಿ, ‘ಇದು ಮಳೆನೀರು ಕಾಲುವೆ ನಿರ್ವಹಣೆ ವಿಭಾ
ಗದ ಎಂಜಿನಿಯರ್ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರಮುಖೇನ ಗಮನಕ್ಕೆ ತರಲಾಗಿದೆ. ಆದರೆ, ಅವರು ಗಮನ ಹರಿಸಿಲ್ಲ’ ಎಂದರು. ‘ಒಂದು ತಿಂಗಳಿನಿಂದ ಕಲ್ಲುಗಳು ಕುಸಿದು ಬಿದ್ದಿವೆ. ಮಕ್ಕಳು ಇಲ್ಲಿಯೇ ಆಟವಾಡುತ್ತಾರೆ. ಅನಾಹುತ ಸಂಭವಿಸಿ
ದರೆ ಯಾರು ಹೊಣೆ’ ಎಂದು ಸ್ಥಳೀಯ ನಿವಾಸಿ ರವಿ ಪ್ರಶ್ನಿಸಿದರು. ಮಳೆನೀರು ಕಾಲುವೆ ನಿರ್ವಹಣೆಯ ಎಂಜಿನಿಯರ್ ತಮ್ಮಯ್ಯ ಕರೆ
ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT