ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರರಾಗಿ ತಾವೇ ಮುಂದುವರಿಯಲು ಆದೇಶಿಸುವಂತೆ ಕೋರಿ ಕೆ. ರಂಗನಾಥಯ್ಯನವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.

ಈ ವಿವಾದದ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮುಂದೆ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿಯೇ ಮನವಿ ಸಲ್ಲಿಸಿ ವಿವಾದ ಬಗೆಹರಿಸಿಕೊಳ್ಳಲು ರಂಗನಾಥಯ್ಯನವರಿಗೆ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಹಾಗೂ ಬಿ.ಮನೋಹರ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅನುಮತಿ ನೀಡಿದೆ. ಈ ಆದೇಶದಿಂದ ಕೆಎಟಿ ಆದೇಶ ಹೊರಬೀಳುವವರೆಗೆ ಕನಕಪುರದ ತಹಶೀಲ್ದಾರ ವೈ.ಎಸ್.ಕೃಷ್ಣ ಅವರು ಉತ್ತರ ತಾಲ್ಲೂಕಿನ ತಹಶೀಲ್ದಾರ ಹುದ್ದೆ ವಹಿಸಲು ಹಸಿರುನಿಶಾನೆ ದೊರೆತಂತಾಗಿದೆ. ಅಂತೆಯೇ ಇವರಿಬ್ಬರ ನಡುವೆ ಬಹಳ ದಿನಗಳಿಂದ ಇದ್ದ ‘ಮುಸುಕಿನ ಗುದ್ದಾಟ’ಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಪ್ರಕರಣದ ವಿವರ: ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರರಾಗಿದ್ದ ರಂಗನಾಥಯ್ಯನವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ರಾಮನಗರದಲ್ಲಿ ಉಪಚುನಾವಣೆ ಇದ್ದ ಹಿನ್ನೆಲೆಯಲ್ಲಿ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಲು ಕನಕಪುರದ ತಹಶೀಲ್ದಾರರಾಗಿದ್ದ ಕೃಷ್ಣ ಅವರನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಚುನಾವಣೆ ಮುಗಿದ ನಂತರ ಕೃಷ್ಣ ಅವರನ್ನು ಬೆಂಗಳೂರು ಉತ್ತರ ತಾಲ್ಲೂಕಿಗೆ ವರ್ಗಾವಣೆ ಮಾಡಲಾಯಿತು.

ಆದರೆ ಈ ಮಧ್ಯೆ, ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ರಂಗನಾಥಯ್ಯನವರು ಕೆಎಟಿಗೆ ಅರ್ಜಿ ಸಲ್ಲಿಸಿದರು. ಅಲ್ಲಿ ವಾದ, ಪ್ರತಿವಾದ ಮುಗಿದು ಆದೇಶವನ್ನು ಕೆಎಟಿ ಕಾಯ್ದಿರಿಸಿದೆ. ಆದರೆ ಆದೇಶ ಬರುವ ಮುಂಚೆಯೇ ರಂಗನಾಥಯ್ಯನವರು ವರ್ಗಾವಣೆ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ ಇದರ ಮಧ್ಯೆ ಪ್ರವೇಶಿಸಲು ಕೋರ್ಟ್ ಬಯಸಲಿಲ್ಲ. ಅರ್ಜಿಯನ್ನು ವಜಾ ಮಾಡಿತು. ಕೃಷ್ಣ ಪರವಾಗಿ ವಕೀಲ ಶ್ಯಾಮಪ್ರಸಾದ ವಾದಿಸಿದ್ದರು.

ನಿವೃತ್ತ ಡಿಜಿಪಿ ದಿನಕರ್ ಅರ್ಜಿ ವಜಾ
ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ನಿವೃತ್ತ ಡಿಜಿಪಿ ಸಿ. ದಿನಕರ್ ಅವರಿಗೆ ಸಿವಿಲ್ ಕೋರ್ಟ್ ನೀಡಿರುವ ನೋಟಿಸ್ಗೆ ತಡೆ ನೀಡಲು ಹೈ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಇವರ ವಿರುದ್ಧ ನಿವೃತ್ತ ಡಿಜಿಪಿ ಡಾ.ಕೃಷ್ಣಮೂರ್ತಿ ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ದಿನಕರ್ ಅವರಿಗೆ ನೋಟಿಸ್ ಜಾರಿಗೆ ಕೋರ್ಟ್ ಆದೇಶಿಸಿದ್ದು, ಅದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

2004ರ ಪ್ರಕರಣವಾಗಿರುವ ಇದರ ವಿಚಾರಣೆಯನ್ನು ವಿನಾ ಕಾರಣ ಎಳೆಯಲು ಇಬ್ಬರು ಐಪಿಎಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ತೀರ್ಪಿನಲ್ಲಿ ಉಲ್ಲೇಖಿಸಿ, ಅರ್ಜಿ ವಜಾ ಮಾಡಿದ್ದಾರೆ.

ಮುರುಗುನ್ ಎಂಬ ಬಿಲ್ಡರ್ ಹತ್ಯೆಯಲ್ಲಿ ಕೃಷ್ಣಮೂರ್ತಿ ಅವರ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಆರೋಪ ಅವರ ದಿನಕರ್ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ಕೋರ್ಟ್ನಲ್ಲಿ 2004ರಲ್ಲಿ ಮಾನನಷ್ಟ ಮೊಕದ್ದಮೆಯನ್ನು ಅವರು ದಾಖಲು ಮಾಡಿದ್ದಾರೆ. ಇದನ್ನು ವಿಚಾರಣೆಗೆ ಅಂಗೀಕರಿಸಿರುವ ಕೋರ್ಟ್, ದಿನಕರ್ ಅವರಿಗೆ ಸಮನ್ಸ್ ಜಾರಿಗೆ ಅದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.