ಬೆಂಗಳೂರು: `ತುಮಕೂರು ವಿಶ್ವವಿದ್ಯಾಲಯವು ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಪರಿಕಲ್ಪನೆಯನ್ನು ಮುರಿದು ವಿಶ್ವವಿದ್ಯಾನಿಲಯದ ಲಾಂಛನವನ್ನು ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ~ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಆರೋಪಿಸಿದ್ದಾರೆ.

`ವಿಶ್ವವಿದ್ಯಾಲಯವು ವಿಶ್ವಮುಖಿಯಾಗಬೇಕೆಂಬ ಆಶಯದೊಂದಿಗೆ ಹೊಸ ಲಾಂಛನ ಹೊರತಂದಿದೆ ಎಂಬ ವಾದವೇ ಸರಿಯಲ್ಲ. ಹಿಂದಿನ ಲಾಂಛನದಲ್ಲಿ ತುಮಕೂರು ಜಿಲ್ಲೆಯ ವೈಶಿಷ್ಟ್ಯತೆಗಳನ್ನು ಪ್ರತಿಬಿಂಬಿಸುವ ಸಂಕೇತಗಳಿದ್ದವು.

ಜ್ಞಾನವೇ ಅನಂತ ಎಂಬ ಘೋಷವಾಕ್ಯವು ಜ್ಞಾನವು ಎಲ್ಲಾ ಗಡಿಗಳನ್ನು ದಾಟಬೇಕು ಎಂಬ ಆಶಯವನ್ನು ಒಳಗೊಂಡಿತ್ತು. ಆದರೆ, ಹೊಸ ಲಾಂಛನದಲ್ಲಿರುವ ಧ್ಯಾನ ನಿರತ ಋಷಿ, ಆತ್ಮಜ್ಯೋತಿ ಹಾಗೂ ಸಂಸ್ಕೃತ ವಾಕ್ಯಗಳು ಪುರಾತನ ಭಾರತದ ಸಂಕುಚಿತ ಮನೋಭಾವವನ್ನೇ ಸಾರುವಂತಿವೆ.

ಇವು ಆಧುನಿಕ ಪ್ರಪಂಚವು ತಿರಸ್ಕರಿಸಿದ ಪ್ರತಿಗಾಮಿ, ಜೀವ ವಿರೋಧಿ ಕೇಸರೀಕರಣದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ~ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.