ಬೆಂಗಳೂರು: `ಬೆಂಗಳೂರಿಗೆ ಸಮರ್ಪಕ ಯೋಜನೆ ಹಾಗೂ ಉತ್ತಮ ಆಡಳಿತ ನೀಡಲು ನಗರಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ರೂಪಿಸಬೇಕು' ಎಂದು ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ-ಪ್ಯಾಕ್) ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಒತ್ತಾಯಿಸಿದರು.

ಬಿ ಪ್ಯಾಕ್ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಂಗಳೂರಿಗೊಂದು ಕಾರ್ಯಸೂಚಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ನಗರದಲ್ಲಿ ಯೋಜನೆ ಹಾಗೂ ಆಡಳಿತ ವಿಭಾಗಗಳನ್ನು ಪ್ರತ್ಯೇಕಿಸಬೇಕು. ಆಡಳಿತ ನಿರ್ವಹಣೆ ಉತ್ತಮಗೊಳ್ಳಲು ಸರ್ಕಾರ, ತಜ್ಞರು ಹಾಗೂ ಹಿರಿಯ ನಾಗರಿಕರ ಸಲಹೆಗಳನ್ನು ಪಡೆಯಬೇಕು. ನಗರದ ಆಡಳಿತ ಸುಧಾರಣೆಗೆ ನಗರಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಸಮರ್ಥ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸಬೇಕು' ಎಂದರು.

`ನಗರದ ಸಮಗ್ರ ನಿರ್ವಹಣೆಯ ಹೊಣೆ ಹೊತ್ತಿರುವ ಬಿಬಿಎಂಪಿಯ ಕಾರ್ಯ ತೃಪ್ತಿದಾಯಕವಾಗಿಲ್ಲ. ಮೇಯರ್ ಯಾರೆಂಬುದೇ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಸ್ಥಳೀಯ ನಿರ್ವಹಣೆಯ ಸಂಸ್ಥೆಗಳನ್ನು ಒಳಗೊಂಡ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ.

ರಾಜ್ಯದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ 65ರಷ್ಟು ಬೆಂಗಳೂರು ನಗರದ ಕೊಡುಗೆ ಇದೆ. ಆದರೆ, ನಗರಕ್ಕೆ ಶೇ 15ರಷ್ಟು ಮಾತ್ರ ಅನುದಾನ ನೀಡಲಾಗುತ್ತಿದೆ. ಹೀಗಾಗಿ ನಗರಕ್ಕೆ ನ್ಯಾಯ ಸಿಗುತ್ತಿಲ್ಲ. ನಗರದಿಂದ ಬರುವ ವೃತ್ತಿ ತೆರಿಗೆ, ಸೇವಾ ತೆರಿಗೆ ಹಾಗೂ ಮೂಲ ಸೌಕರ್ಯ ತೆರಿಗೆಯ ಹಣವನ್ನು ಸಂಪೂರ್ಣವಾಗಿ ನಗರಕ್ಕೇವಿನಿಯೋಗಿಸಬೇಕು' ಎಂದು ಒತ್ತಾಯಿಸಿದರು.

`ಬಿ ಪ್ಯಾಕ್ ವತಿಯಿಂದ ಹೊಸದಾಗಿ 6 ಲಕ್ಷ ಮತದಾರರನ್ನು ನೋಂದಾಯಿಸಲಾಗಿದೆ. ಇದರಿಂದ ನಗರದ ಮತದಾನದ ಪ್ರಮಾಣವೂ ಹೆಚ್ಚಾಗಿದೆ' ಎಂದು ಹೇಳಿದರು.

ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ಜನತೆ ನೆಮ್ಮದಿಯಿಂದ ಬದುಕುವಂತ ಆಡಳಿತವನ್ನು ಸರ್ಕಾರ ನೀಡಬೇಕು. ಸರ್ಕಾರದ ಬಗ್ಗೆ ಜನರು ಸಿನಿಕರಾಗದಂತೆ ಆಡಳಿತ ನಡೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ' ಎಂದರು.

ನಂತರ ಸಂವಾದದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, `ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ್ಙ 10 ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. `ನಮ್ಮ ಮೆಟ್ರೊ' ಮೂರನೇ ಹಂತದ ವಿಸ್ತರಣೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ' ಎಂದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, `ನಗರದಲ್ಲಿ ಉತ್ತಮ ಆಡಳಿತ ನೀಡಲು ನಿವಾಸಿಗಳ ಸಂಘದ ಸದಸ್ಯರು ನೀಡುವ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು. ಅಭಿವೃದ್ಧಿಗೆ ತಜ್ಞರ ಸಲಹೆ ಅಗತ್ಯ' ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಮಾತನಾಡಿ, `ಜಯದೇವ ಆಸ್ಪತ್ರೆಯ ಬಳಿ `ನಮ್ಮ ಮೆಟ್ರೊ' ಮಾರ್ಗ ಬದಲಾವಣೆ ಪ್ರಕ್ರಿಯೆ ನಾಲ್ಕು ತಿಂಗಳಿಂದ ನಡೆಯುತ್ತಿದೆ. ಮಾರ್ಗ ಬದಲಾವಣೆಗೆ ಆಸ್ಪತ್ರೆ ಆಡಳಿತ ಮಂಡಳಿಯೇ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿತ್ತು. ಹೀಗಾಗಿ ಮಾರ್ಗ ಬದಲಾವಣೆಯ ನಿರ್ಧಾರಕ್ಕೆ ಬರಲಾಗಿದೆ' ಎಂದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾತನಾಡಿ, `ಜನರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಮೂರು ತಿಂಗಳಲ್ಲಿ ಮಿನಿ ಬಸ್ ಸೇವೆ ಆರಂಭಿಸುವ ಚಿಂತನೆ ಇದೆ' ಎಂದು ತಿಳಿಸಿದರು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ, `ರಾಜ್ಯದಲ್ಲಿ ಪ್ರತಿ ವರ್ಷ ಶೇ 15ರಿಂದ 20ರಷ್ಟು ವಿದ್ಯುತ್ ಕೊರತೆ ಎದುರಾಗುತ್ತಿದೆ. ಆದರೂ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಳಸುತ್ತಿರುವ ವಿದ್ಯುತ್ನ ಶೇ 12ರಷ್ಟು ಪ್ರಮಾಣವು ನವೀಕರಿಸಬಹುದಾದ ಇಂಧನ ಮೂಲಗಳಿಂದ ದೊರೆಯುತ್ತಿದೆ' ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಬಿ.ಎನ್. ವಿಜಯ್ಕುಮಾರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎನ್.ಎ.ಹ್ಯಾರಿಸ್, ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ, ಬಿ ಪ್ಯಾಕ್ ಉಪಾಧ್ಯಕ್ಷ ಮೋಹನ್ದಾಸ್ ಪೈ, ಸದಸ್ಯ ಪ್ರಕಾಶ್ ಬೆಳವಾಡಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.