ಬೆಂಗಳೂರು: ‘ಪಡಿತರ ವಿತರಣೆಯನ್ನು ಖಾಸಗಿಯವರಿಗೆ ನೀಡದೆ, ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರಗಳೇ ಜವಾಬ್ದಾರಿ ವಹಿಸಿಕೊಳ್ಳಬೇಕು. ಆಗ ಮಾತ್ರ ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಯಬಹುದು’ ಎಂದು ಭಾರತೀಯ ಸಾಮಾಜಿಕ ಭದ್ರತಾ ಸಂಘದ ನಿವೃತ್ತ ಪ್ರಧಾನ ಕಾರ್ಯದರ್ಶಿ ಆರ್ಕೆಎ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಭಾರತೀಯ ಸಾಮಾಜಿಕ ಭದ್ರತಾ ಸಂಘವು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಮಾಜಿಕ ರಕ್ಷಣೆ ಮತ್ತು ಆಹಾರ ಭದ್ರತೆ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಪಡಿತರ ವಿತರಣೆಯನ್ನು ಖಾಸಗಿಯವರಿಗೆ ನೀಡಿರುವುದರಿಂದ ವಿತರಕರು, ಮಾರಾಟಗಾರರು, ಸಾಗಾಟಗಾರರು ಹೀಗೆ ನಾನಾ ಹಂತಗಳ ಮೂಲಕ ಫಲಾನುಭವಿಗಳಿಗೆ ತಲುಪುತ್ತದೆ. ಕೇಂದ್ರ ಸರ್ಕಾರ ಕಳೆದ ತಿಂಗಳು ನೇಮಿಸಿರುವ ‘ಪಡಿತರ ಮೌಲ್ಯಮಾಪಕರ’ ತಂಡವು ಶೇ 57ರಷ್ಟು ಫಲಾನುಭವಿಗಳಿಗೆ ಪಡಿತರ ಸೌಲಭ್ಯವು ದೊರೆತಿಲ್ಲ ಎಂಬುದಾಗಿ ವರದಿ ಸಲ್ಲಿಸಿದೆ. ಆದ್ದರಿಂದ ಪಡಿತರ ವಿತರಣೆ ವ್ಯವಸ್ಥೆ (ಟಿಪಿಡಿಎಸ್)ಯನ್ನು ಆಯಾ ಸರ್ಕಾರಗಳೇ ವಹಿಸಿಕೊಳ್ಳಲಿ’ ಎಂದರು.

‘ತಮಿಳುನಾಡು, ಕೇರಳ ಮತ್ತು ಛತ್ತೀ ಸಗಡ ರಾಜ್ಯಗಳಲ್ಲಿ ಪಡಿತರ ವಿತರಣೆ ಯನ್ನು ಖಾಸಗಿಯವರಿಗೆ ನೀಡದೆ ಸಹ ಕಾರಿ ಸಂಘಗಳು ಮತ್ತು ಸರ್ಕಾರಿ ಮಳಿಗೆಗಳ ಮೂಲಕವೇ ವಿತರಿಸಲಾಗು ತ್ತಿದೆ. ಧಾನ್ಯಗಳ ಸರಬರಾಜಿಗೂ ಸರ್ಕಾರಿ ಸಾರಿಗೆಯನ್ನೇ ಬಳಸಲಾಗು ತ್ತಿದೆ. ಹೀಗಾಗಿ ಅಲ್ಲಿ ಸೋರಿಕೆ ಪ್ರಮಾಣ ವಿಲ್ಲದೆ ಯೋಜನೆ ಯಶಸ್ವಿಯಾಗಿದೆ. ಅಂತಹ ವ್ಯವಸ್ಥೆಯನ್ನು ಕರ್ನಾಟಕ ದಲ್ಲೂ ಜಾರಿಗೆ ತರಬೇಕು’ ಎಂದು ಹೇಳಿದರು.

ಭಾರತೀಯ ಸಾಮಾಜಿಕ ಭದ್ರತಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಸೋಮ್, ‘ರಾಷ್ಟ್ರೀಯ ಆಹಾರ ಭದ್ರತೆ ಹಕ್ಕು’ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ದುಂಡುಮೇಜಿನ ಸಭೆ ಯನ್ನು ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.