ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ ಸಮಾಜ ಅವಿವೇಕಿಗಳ ಯುಗ: ಗೋ.ರು.ಚನ್ನಬಸಪ್ಪ

ವಿಶ್ವ ಸಂವಹನಕಾರರ ದಿನಾಚರಣೆ
Last Updated 2 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸ್ತುತ ಇರುವ ಸಮಾಜ ಅವಿವೇಕಿಗಳ ಯುಗ. ನಿಷ್ಠೆಯಿಂದ‌ ಸೇವೆ ಸಲ್ಲಿಸುವವರನ್ನು ಕೊಲ್ಲುತ್ತಿದ್ದಾರೆ. ಮರ್ಯಾದೆ ಹತ್ಯೆ, ಹೆತ್ತ ತಂದೆ ತಾಯಿಯನ್ನೇ ಕೊಲೆ, ಕಳ್ಳತನ, ಮಗಳ ಮೇಲೆ ತಂದೆ ಅತ್ಯಾಚಾರ, ಭ್ರಷ್ಟಾಚಾರ ಹೀಗೆ ನಮ್ಮ ಸುತ್ತಮುತ್ತ ಇಂಥ ವಿದ್ಯಮಾನಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಸಾಹಿತಿ ಡಾ.ಗೊ.ರು.ಚನ್ನ‌ಬಸಪ್ಪ ಹೇಳಿದರು.

ನಯನ ಸಭಾಂಗಣದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಹಾಮಂಡಳಿ (ಪಿಆರ್‌ಸಿಐ) ಮತ್ತು ಯುವ ಸಂವಹನಕಾರರ ಮಂಡಳಿ (ವೈಸಿಸಿ) ಆಯೋಜಿಸಿದ್ದ ವಿಶ್ವ ಸಂವಹನಕಾರರ ದಿನಾಚರಣೆ–2018 ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಿ ಡಾ.ಸಿದ್ದಲಿಂಗಯ್ಯ, ‘ಸಾಮಾಜಿಕ ವಿಚಾರಗಳ ಬಗ್ಗೆ ಗಮನ ಹರಿಸಬೇಕಾದ ಸಾಮಾಜಿಕ ಕೋಶಗಳನ್ನು ಸಾರ್ವಜನಿಕ ಸಂಪರ್ಕ ಸಂಸ್ಥೆ ಹೊಂದಿದೆ. ಇದು ಜನೋಪಯೋಗಿ ಹುದ್ದೆ. ಅವಿದ್ಯಾವಂತರಿಗೆ ಸಂಸ್ಥೆಗಳಲ್ಲಿ ಯಾರನ್ನು ಸಂಪರ್ಕಿಸಿದರೆ ಮಾಹಿತಿ ಪಡೆಯಬಹುದು ಎಂಬುದರ ಅರಿವು ಇರುವುದಿಲ್ಲ. ಇವರ ಸಂವಹನದ ಕೊರತೆಯನ್ನು ನೀಗಿಸಬೇಕು’ ಎಂದರು.

ಪಿಆರ್‌ಸಿಐ ಅಧ್ಯಕ್ಷೆ ಡಾ.ಲತಾ ಟಿ.ಎಸ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT