ಬೆಂಗಳೂರು: ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರ ಪತ್ನಿ ಸುಜಾ ಜೋನ್ಸ್ ಫ್ರಾನ್ಸ್ ರಾಯಭಾರ ಕಚೇರಿಗೆ ಪತ್ರ ಬರೆದಿದ್ದಾರೆ.

`ನನ್ನ ಹೆಸರಿನಲ್ಲಿ ಫ್ರಾನ್ಸ್ ಮತ್ತು ಭಾರತದಲ್ಲಿ ಎರಡು ಬ್ಯಾಂಕ್ ಖಾತೆಗಳಿವೆ. ಆದರೆ, ಪತಿ ಆ ಎರಡು ಖಾತೆಗಳ ರಹಸ್ಯ ಸಂಖ್ಯೆಗಳನ್ನು (ಪಾಸ್ವರ್ಡ್) ಬದಲಾಯಿಸಿದ್ದಾರೆ. ಹಾಗಾಗಿ ನನಗೆ ಹಣ ಪಡೆಯಲಾಗದೆ ಆರ್ಥಿಕ ಸಮಸ್ಯೆ ಎದುರಾಗಿದೆ~ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

`ಪ್ರಕರಣದ ವೇಳೆ ಫ್ರಾನ್ಸ್ ಕಾನ್ಸುಲ್ ಅಧಿಕಾರಿಗಳು ತಟಸ್ಥವಾಗಿರಬೇಕಿತ್ತು. ಆದರೆ, ಪಾಸ್ಕಲ್ ಫ್ರಾನ್ಸ್ ಪ್ರಜೆಯಾಗಿರುವುದರಿಂದ ಅಧಿಕಾರಿಗಳು ತನಿಖೆ ವೇಳೆ ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ನಗರ ಪೊಲೀಸರು ಪತಿಯನ್ನು ಬಂಧಿಸಿ ಬೆಂಗಳೂರಿನಲ್ಲಿರುವ ಫ್ರಾನ್ಸ್ನ ಕಾನ್ಸುಲ್ ಜನರಲ್ ಕಚೇರಿಯ ಡೆಪ್ಯೂಟಿ ಕಾನ್ಸುಲ್ ವಿನ್ಸೆಂಟ್ ಕೌಮಾಟೆಂಟ್ ಅವರ ವಶಕ್ಕೆ ಒಪ್ಪಸಿದಾಗಲೇ ನನ್ನ ಬ್ಯಾಂಕ್ ಖಾತೆಯ ರಹಸ್ಯಸಂಖ್ಯೆಗಳನ್ನು ಪತಿ ಬದಲಾಯಿಸಿದ್ದಾರೆ ಎಂದು ಸುಜಾ ತಿಳಿಸಿದ್ದಾರೆ.

`ಮಗಳ ಮೇಲೆ ಅತ್ಯಾಚಾರ ನಡೆದ ದಿನ ಕಾನ್ಸುಲ್ ಕಚೇರಿ ಮೂಲಕ ಫ್ರಾನ್ಸ್ ಪೊಲೀಸರಿಗೆ ದೂರು ನೀಡುವಂತೆ ಕೌಮಾಟೆಂಟ್ ಅವರ ಬಳಿ ಮನವಿ ಮಾಡಿದ್ದೆ. ಆದರೆ, ಇಂತಹ ಪ್ರಕರಣಗಳಲ್ಲಿ ಕಾನ್ಸುಲ್ ಕಚೇರಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಅವರು ದೂರ ಸರಿದಿದ್ದರು~ ಎಂದಿದ್ದಾರೆ.

`ಈಗ ಆರ್ಥಿಕ ಸಮಸ್ಯೆ ಎದುರಾಗಿದ್ದು, ಜೀವನ ನಡೆಸುವುದೂ ಕಷ್ಟವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಅಪಾರ್ಟ್ಮೆಂಟ್ನ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು~ ಎಂದು ಸುಜಾ ಅಳಲು ತೋಡಿಕೊಂಡಿದ್ದಾರೆ.

`ನನ್ನ ಬ್ಯಾಂಕ್ ಖಾತೆಯ ರಹಸ್ಯ ಸಂಖ್ಯೆಗಳನ್ನು ಬದಲಾಯಿಸುರುವ ಬಗ್ಗೆ ಮತ್ತು ಖಾತೆಯಲ್ಲಿದ್ದ ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿರುವ ಅನುಮಾನವಿದೆ ಎಂದು ಕಾನ್ಸುಲ್ ಜನರಲ್ ಕಚೇರಿಯ ಅಧಿಕಾರಿ ಡಾಮಿನಿಕ್ ಕಾಸ್ ಅವರಿಗೆ ಇ-ಮೇಲ್ ಮೂಲಕ ಸಂದೇಶ ರವಾನಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ~ ಎಂದು ಸುಜಾ ಪತ್ರದಲ್ಲಿ ತಿಳಿಸಿದ್ದಾರೆ.

ವರದಿ ಪರಿಶೀಲನೆಗೆ ಪತ್ರ: ಡಿಎನ್ಎ ಪರೀಕ್ಷೆ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಗೊಂದಲವಿದೆ ಎಂದು ಹೇಳಿರುವ ತನಿಖಾಧಿಕಾರಿಗಳು, ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸ್ಪಷ್ಟತೆ ನೀಡುವಂತೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸೋಮವಾರ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.