ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಬಂಧನ

Last Updated 30 ಜುಲೈ 2014, 20:22 IST
ಅಕ್ಷರ ಗಾತ್ರ

ಬೆಂಗಳೂರು: ಸುಂಕದಕಟ್ಟೆ ಬಳಿಯ ಬೈರ­ವೇ­ಶ್ವರನಗರದಲ್ಲಿ ಏಳು ವರ್ಷದ ಬಾಲಕಿ ಮೇಲೆ ಶ್ರೀನಿವಾಸ್‌ (28) ಎಂಬಾತ ಅತ್ಯಾಚಾರ ಎಸಗಿದ್ದು, ಕಾಮಾ­­­ಕ್ಷಿ­ಪಾಳ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಡಗಿಯಾದ ಶ್ರೀನಿವಾಸ್, ತನ್ನ ತಾಯಿಗೆ ಪರಿಚಯ­ವಿರುವ ಮಹಿಳೆ­ಯೊ­ಬ್ಬರ ಮಗಳ ಮೇಲೆ ಶುಕ್ರವಾರ (ಜು.25) ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್‌, ತಾಯಿಯೊಂದಿಗೆ ಬೈರ­ವೇಶ್ವರನಗರ ಎರಡನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತನ ತಾಯಿ ಸುಂಕದಕಟ್ಟೆಯ ಖಾಸಗಿ ಶಾಲೆ­ಯಲ್ಲಿ ಸ್ವಚ್ಛತಾ ಕೆಲಸ ಮಾಡು­ತ್ತಾರೆ. ಅದೇ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳ ತಾಯಿ, ಅವರಿಗೆ ಪರಿಚಿತರಾಗಿದ್ದರು.

ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾರ್ಥಿನಿ ತಾಯಿ, ಕೆಲಸಕ್ಕೆ ಹೋಗುವಾಗ ಮಗ­ಳನ್ನು ಶ್ರೀನಿವಾಸ್‌ನ ತಾಯಿಯ ಬಳಿ  ಬಿಟ್ಟು ಹೋಗುತ್ತಿ­ದ್ದರು. ಅದೇ ರೀತಿ ಅವರು ಶುಕ್ರವಾರ ಮಗಳನ್ನು ಬಿಟ್ಟು ಕೆಲ­ಸಕ್ಕೆ ಹೋಗಿದ್ದರು. ಆ ದಿನ ಸಂಜೆ ಆರೋಪಿ ತಾಯಿ, ಬಾಲಕಿಗೆ ಮನೆ­ಯಲ್ಲಿ ಇರುವಂತೆ ಹೇಳಿ ತರಕಾರಿ ತರಲು ಹೋಗಿದ್ದರು. ಆಗ ಮನೆ­ಯಲ್ಲೇ ಇದ್ದ ಶ್ರೀನಿವಾಸ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಬಾಲಕಿಗೆ ಭಾನುವಾರ ಜ್ವರ ಬಂದಿದ್ದರಿಂದ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ­ದ್ದಾರೆ. ಆಗ ಅತ್ಯಾಚಾರ ಪ್ರಕರಣ ಬೆಳ­ಕಿಗೆ ಬಂದಿದೆ. ಬಳಿಕ ಅವರು ಮಂಗಳ­ವಾರ ರಾತ್ರಿ ಠಾಣೆಗೆ ದೂರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT