ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ

ತೆರಿಗೆ ಸಮಿತಿಗೆ ಗುಣಶೇಖರ್‌ ಅಧ್ಯಕ್ಷ
Last Updated 20 ಅಕ್ಟೋಬರ್ 2016, 6:03 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಜಯಮಹಲ್‌ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಎಂ.ಕೆ. ಗುಣಶೇಖರ್‌ ಅವರು ನೇಮಕಗೊಳ್ಳುವುದು ಖಚಿತವಾಗಿದೆ.

ಗುಣಶೇಖರ್‌ ಅವರ ಹೆಸರು ಆಡಳಿತ ಪಕ್ಷದ ನಾಯಕನ ಹುದ್ದೆಗೆ ಕೇಳಿಬಂದಿತ್ತು. ಗುರಪ್ಪನಪಾಳ್ಯ ವಾರ್ಡ್‌ನ ಮೊಹಮ್ಮದ್‌ ರಿಜ್ವಾನ್‌ ಅವರು ಆಡಳಿತ ಪಕ್ಷದ ನಾಯಕರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ಬುಧವಾರ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಪ್ರತಿಯೊಂದು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರಿಗೆ ತಲಾ ನಾಲ್ಕು ಅಧ್ಯಕ್ಷ ಸ್ಥಾನಗಳನ್ನು ನಿಗದಿ ಮಾಡಲಾಗಿದೆ.

ಸ್ಥಾಯಿ ಸಮಿತಿಗಳ ಅಧ್ಯಕ್ಷರ ವಿವರ : ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ–ಎಂ.ಕೆ. ಗುಣಶೇಖರ್‌ (ಜಯಮಹಲ್‌), ತೋಟಗಾರಿಕೆ ಸ್ಥಾಯಿ ಸಮಿತಿ–ಮೀನಾಕ್ಷಿ (ಬೆನ್ನಿಗಾನಹಳ್ಳಿ), ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ–ಚಂದ್ರಪ್ಪ (ಹೊಂಬೇಗೌಡನಗರ), ಅಪೀಲುಗಳ ಸ್ಥಾಯಿ ಸಮಿತಿ ಜಿ.ಕೆ. ವೆಂಕಟೇಶ್‌ (ಯಶವಂತಪುರ) –ನಾಲ್ವರೂ ಕಾಂಗ್ರೆಸ್‌.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ–ಮಂಜುಳಾ ನಾರಾಯಣಸ್ವಾಮಿ (ಲಗ್ಗೆರೆ), ವಾರ್ಡ್‌ಮಟ್ಟದ ಸಾರ್ವಜನಿಕ ಸ್ಥಾಯಿ ಸಮಿತಿ–ಭದ್ರೇಗೌಡ (ನಾಗಪುರ), ಲೆಕ್ಕಪತ್ರ ಸ್ಥಾಯಿ ಸಮಿತಿ–ನೇತ್ರಾ ನಾರಾಯಣ್‌ (ಕಾವಲ್‌ ಬೈರಸಂದ್ರ), ಶಿಕ್ಷಣ ಸ್ಥಾಯಿ ಸಮಿತಿ–ನಜೀಬಾ ಖಾನಂ (ಕೆ.ಆರ್‌. ಮಾರುಕಟ್ಟೆ)–ನಾಲ್ವರೂ ಜೆಡಿಎಸ್‌.

ಆರೋಗ್ಯ ಸ್ಥಾಯಿ ಸಮಿತಿ–ಆನಂದಕುಮಾರ್‌ (ಹೊಯ್ಸಳನಗರ), ಮಾರುಕಟ್ಟೆ ಸ್ಥಾಯಿ ಸಮಿತಿ–ಎಂ.ಗಾಯತ್ರಿ (ಕೆಂಪಾಪುರ ಅಗ್ರಹಾರ), ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ–ಏಳುಮಲೈ (ಸಗಾಯಪುರ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ–ಚಂದ್ರಪ್ಪ ರೆಡ್ಡಿ (ಕೋನೇನ ಅಗ್ರಹಾರ) –ಎಲ್ಲರೂ ಪಕ್ಷೇತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT