ಬೆಂಗಳೂರು: ಮೊಬೈಲ್ ಬಳಕೆ ಹಾಗೂ ಮೊಬೈಲ್ ಗೋಪುರ (ಟವರ್) ಗಳಿಂದ ಮೆದುಳಿನ ಕ್ಯಾನ್ಸರ್ ಬರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿವೃತ್ತ ಸಂಶೋಧಕ ಪ್ರೊ. ಮೈಕೆಲ್ ರೆಪೆಕೊಲಿ ಅಭಿಪ್ರಾಯಪಟ್ಟರು. ಹರ್ ಆನಂದ್ ಪ್ರಕಾಶಕರ ಸಂಸ್ಥೆ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮೊಬೈಲ್ ಫೋನ್ ಗಳು ಮತ್ತು ಜನರ ಆರೋಗ್ಯ–ಭ್ರಮೆ ಮತ್ತು ವಾಸ್ತವ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ವಿಶ್ವದ ಕೆಲ ಪ್ರದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮೊಬೈಲ್ ರೇಡಿಯೇ ಷನ್‌ಗಳ ಬಗ್ಗೆ ವಿಸ್ತೃತ ಸಂಶೋಧನೆ ಗಳನ್ನು ನಡೆಸಿದ್ದು, ಅದರಿಂದ ಮಾನವನ ದೇಹದ ಮೇಲೆ ಅಪಾಯವಿಲ್ಲ ಎಂದು ದೃಢಪಟ್ಟಿದೆ ಎಂದರು. ಮೊಬೈಲ್ ಹಾಗೂ ಮೊಬೈಲ್ ಗೋಪುರಗಳಿಂದ ಹೊರ ಬರುವ ‘ರೇಡಿಯೊ ಫ್ರೀಕ್ವೆನ್ಸಿ’ (ವಿದ್ಯುತ್ ಕಾಂತೀಯ ತರಂಗ)ಯಿಂದ ಆಗುವ ಪರಿಣಾಮಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ ಎಂದರು.

‘ಈ ಕುರಿತು ನಡೆದಿರುವ ಸಂಶೋಧನೆ ಗಳಲ್ಲೂ ಮಾನವನಿಗೆ ದೈಹಿ ಕವಾಗಿ ತೊಂದರೆ ಆಗುತ್ತದೆ ಎಂದು ಎಲ್ಲೂ ದೃಢಪಟ್ಟಿಲ್ಲ. ಅಲ್ಲದೆ ಮೊಬೈ ಲನ್ನು 10 ರಿಂದ 20 ನಿಮಿಷ ಬಳಕೆ ಮಾಡಿದಾಗ ಅದರಿಂದ ಬಿಡುಗಡೆ ಶೇಕಡ 0.1 ರಷ್ಟು ಎಲೆಕ್ಟ್ರೊ ಮೈಕ್ರೊ ವ್ಯಾಟ್ಸ್ ಉಷ್ಣಾಂಶದಿಂದ ಮಾನವ ದೇಹದಲ್ಲಿ ರೀತಿಯ ಬದ ಲಾವಣೆ ಆಗುವುದಿಲ್ಲ’ ಎಂದು ವಿವರಿಸಿದರು.

‘ವಿದೇಶಗಳಲ್ಲಿ ಮೊಬೈಲ್ ಗೋಪುರ ಗಳನ್ನು ಶಾಲೆಗಳ ಮೇಲೆ ಹಾಕಲಾ ಗುತ್ತದೆ. ಕಾರಣ ಮೊಬೈಲ್ ಗೋಪುರ ದಿಂದ ಹೊರ ಬರುವ ‘ರೇಡಿಯೊ ಫ್ರೀಕ್ವೆನ್ಸಿ’ (ವಿದ್ಯುತ್ ಕಾಂತೀಯ ತರಂಗ)ನೂರು ಮೀಟರ್ ದೂರದ ವರೆಗೆ ಹೋಗಿ ನಂತರ ಭೂಮಿಯನ್ನು ತಲುಪುತ್ತವೆ. ಇದರಿಂದಾಗಿ ಮಕ್ಕಳ ಮೇಲೆ ತರಂಗಗಳ ಪರಿಣಾಮ ತುಂಬಾ ಕಡಿಮೆ ಇರುತ್ತದೆ’ ಎಂದರು.

‘ಅದರಲ್ಲೂ ಭಾರತದಲ್ಲಿ ಮೊಬೈಲ್ ಗೋಪುರವನ್ನು ಹಾಕುವಾಗ ಬಳಸುವ ನಿಯಮಗಳು, ವಿದೇಶಗಳಲ್ಲಿ ಇರುವ ನಿಯಮಗಳಿಗಿಂತ ಹತ್ತು ಪಟ್ಟು ಕಠಿಣ ವಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಆದರೆ ಕೆಲವರು ಈ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ತಪ್ಪು ಮಾಹಿತಿ ನೀಡಿ, ಜನರಲ್ಲಿ ಆತಂಕ ಮೂಡಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ಪುಸ್ತಕದ ಸಂಪಾದಕ ರವಿ. ವಿ.ಎಸ್.ಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.