ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ಉದ್ಯಮಿಯ ಬಂಧನ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಜಲಮಂಡಲಿಯಿಂದ ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ನಂಬಿಸಿ  ಕರಪತ್ರ ಹಂಚಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಜಲಮಂಡಲಿ ಪೂರ್ವ ವಲಯದ ಐದನೇ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮುರಳಿ ಅವರು ದೇವಿ ರಿಯಲ್ ಎಸ್ಟೇಟ್ ಸಂಸ್ಥೆಯ ಬಾಲಾಜಿ ಎಂಬುವವರ ವಿರುದ್ಧ ನಗರದ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

`ಬೆಂಗಳೂರು ಜಲಮಂಡಲಿಯಿಂದ ಕಾವೇರಿ ನೀರಿನ ಸೌಲಭ್ಯವನ್ನು ವಿಜ್ಞಾನನಗರದಲ್ಲಿ ಸಂಸ್ಥೆ ಒದಗಿಸಲಿದೆ, ನೀರಿನ ಸಂಪರ್ಕ ಬಯಸುವವರು ಸಂಬಂಧಪಟ್ಟ ದಾಖಲೆಗಳನ್ನು ತಮ್ಮ ಕಚೇರಿಗೆ ಸಲ್ಲಿಸಬೇಕು ಎಂಬ ಕರಪತ್ರಗಳನ್ನು ಬಾಲಾಜಿ ಹೊರಡಿಸಿದ್ದರು. ನೀರು ಸರಬರಾಜು ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ತಲಾ ರೂ 2500 ರೂಪಾಯಿ ಹಣವನ್ನು ಈತ ವಸೂಲಿ ಮಾಡುತ್ತಿದ್ದರು~ ಎಂದು ಪೊಲೀಸರು ತಿಳಿಸಿದ್ದಾರೆ. 

 ಕರಪತ್ರದಲ್ಲಿ ಶಾಸಕ ನಂದೀಶ್ ರೆಡ್ಡಿ ಮತ್ತು ವಿಜ್ಞಾನನಗರ ಪಾಲಿಕೆ ಸದಸ್ಯೆ ಗೀತಾ ವಿವೇಕಾನಂದ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿತ್ತು.

ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಗೀತಾ, `ಜಲಮಂಡಲಿ ಗುತ್ತಿಗೆದಾರರ ಸಂಘ ಅನುಮತಿ ನೀಡಿದೆ ಎಂದು ಹೇಳಿಕೊಂಡು ಬಾಲಾಜಿ ಎಂಬುವವರು ನಮ್ಮನ್ನು ಸಂಪರ್ಕಿಸಿದರು. ಆದರೆ ಅವರ ಬಳಿ ಕಾರ್ಯಾದೇಶ ಪತ್ರ ಇರಲಿಲ್ಲ. ಇದರಿಂದ ಅನುಮಾನ ಬಂದು ಪರಿಶೀಲಿಸಿದಾಗ ಅದು ವಂಚನೆ ಎಂದು ತಿಳಿಯಿತು. ಕರಪತ್ರದಲ್ಲಿ ಭಾವಚಿತ್ರ ಮುದ್ರಿಸಿರುವ ಬಗ್ಗೆ ನಮಗೆ ಗೊತ್ತಿರಲಿಲ್ಲ. ಕೂಡಲೇ ಕರಪತ್ರಗಳನ್ನು ಹಂಚದಂತೆ ಆತನಿಗೆ ಸೂಚಿಸಲಾಯಿತು~ ಎಂದು ಹೇಳಿದ್ದಾರೆ. ಬಾಲಾಜಿ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಲಮಂಡಲಿ ಅಧಿಕಾರಿಗಳು, `ಖಾಸಗಿ ವ್ಯಕ್ತಿಗಳಿಗೆ ಹಣ ಸಂಗ್ರಹಿಸುವ ಅಧಿಕಾರ ನೀಡಿಲ್ಲ. ಹೊಸದಾಗಿ ನೀರಿನ ಸಂಪರ್ಕ ಪಡೆಯುವಾಗ ಜಲಮಂಡಲಿಯ ಸಮೀಪದ ಕಛೇರಿಗಳನ್ನು ಸಂಪರ್ಕಿಸಿ ಅಧಿಕೃತವಾಗಿ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ಸಾರ್ವಜನಿಕರು ಪಾವತಿ ಮಾಡಬೇಕು~ ಎಂದು ಕೋರಿದ್ದಾರೆ.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT