ಬೆಂಗಳೂರು: ನಗರದಲ್ಲಿ ಬುಧವಾರ 66 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ, ಸಡಗರ... ಎಲ್ಲೆಲ್ಲೂ ದೇಶದಧ್ವಜ ಸ್ವಚ್ಛಂದವಾಗಿ ಹಾರಾಡಿ ಅಭಿಮಾನ ಮೂಡಿಸಿದ ಕ್ಷಣಗಳು. ದೇಶಾಭಿಮಾನ ಉಕ್ಕಿ ಹರಿದ ದಿನ. ವಿವಿಧೆಡೆಗಳಲ್ಲಿ ನಮ್ಮ ರಾಷ್ಟ್ರ ನಾಯಕರನ್ನು ನೆನೆದು ನಮನ ಸಲ್ಲಿಸಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ರೈಲು ನಿಲ್ದಾಣ ಸಮೀಪದ ಖೋಡೆ ವೃತ್ತದ ಬಳಿಯ ಕನ್ನಡ ನಾಡಿನ ಮೊದಲ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮೇಯರ್ ಡಿ. ವೆಂಕಟೇಶಮೂರ್ತಿ ಮಾತನಾಡಿ, `ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಈ ನಾಡಿನಲ್ಲಿ ಸ್ವಾತಂತ್ರ್ಯ ಕಹಳೆಯನ್ನು ಮೊಳಗಿಸಿದವರು. ಅವರ ವೀರತ್ವ, ಕೆಚ್ಚು, ಸ್ವಾಮಿ ಭಕ್ತಿ, ನಾಡನಿಷ್ಠೆ ಹಾಗೂ ಪ್ರಾಮಾಣಿಕತೆ ಕನ್ನಡ ಜನಮನದಲ್ಲಿ ಇನ್ನೂ ಕೂಡ ಉಳಿದಿದೆ.

ನಾಡಿನ ಜನಪದ ಗೀತೆಗಳು, ಲಾವಣಿ ಪದಗಳು ಅವರ ಹೋರಾಟದ ಕಿಚ್ಚನ್ನು ಸಾರಿ ಹೇಳುತ್ತವೆ. ಇಂದಿಗೂ ತಾಯಂದಿರು ಹುಟ್ಟಿದರೆ ರಾಯಣ್ಣನಂತಹ ಮಗ ಹುಟ್ಟಲಿ ಎಂದು ಪ್ರಾರ್ಥಿಸುತ್ತಾರೆ~ ಎಂದು ರಾಯಣ್ಣನ ವೀರತ್ವವನ್ನು ಸಾರಿದರು. ಕಾರ್ಯಕ್ರಮದಲ್ಲಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ: ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ ಹಾಗೂ ಕರ್ನಾಟಕ ನವೋದಯ ಸಂಘ ಮತ್ತಿತರ ಸಂಘಟನೆಗಳು ಜಂಟಿಯಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಶ್ವೇಶ್ವರಪುರದ ಸಜ್ಜನರಾವ್ ವೃತ್ತದ ಬಳಿ ಆಯೋಜಿಸಿದ್ದವು. ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಆರ್. ಎಸ್.ಬೆನಗಲ್ ಅವರ ಪತ್ನಿ ಮೀರಾ ಬೆನಗಲ್ ಅವರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ನಂತರ ಬಡಾವಣೆಯ ಮುಖ್ಯ ಬೀದಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಾಗೂ ರಾಷ್ಟ್ರ ಧ್ವಜದೊಂದಿಗೆ ವಿಶೇಷ ಮೆರವಣಿಗೆ ನಡೆಸಲಾಯಿತು.

ಮೀರಾ ಬೆನಗಲ್ ಮಾತನಾಡಿ `ದೇಶವು ಸ್ವಾತಂತ್ರ್ಯ ಪಡೆದು ಇಂದಿಗೆ 66 ವರ್ಷಗಳು ಕಳೆದಿವೆ. ನಾಡಿನ ನಾಯಕರನ್ನು ನೆನೆದು ನಮನ ಸಲ್ಲಿಸುವ ದಿನವಾಗಿದೆ. ನಮ್ಮ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇಂದಿನ ಯುವ ಜನತೆಯ ಮೇಲಿದೆ~ ಎಂದರು.

ಜಯನಗರ ಸಾಂಸ್ಕೃತಿಕ ಸಂಘ: ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯನ್ನು ಜಯನಗರ 4 ನೇ ಬಡಾವಣೆಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಸಂಭ್ರಮದಿಂದ ಆಚರಿಸಿತು.

ಸಂಸ್ಥೆಯ ಅಧ್ಯಕ್ಷ ಬಿ.ಆರ್. ವಾಸುದೇವ್ ಮಾತನಾಡಿ, `ದೇಶದ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ತನು, ಮನ, ಧನವನ್ನು ಅರ್ಪಿಸಿದರು. ಇಂದು ನಾಡಿಗೆ ಅಂತಹ ನಾಯಕರ ಅವಶ್ಯಕತೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ವೀರರಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ, ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ~ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಸದಸ್ಯರಾದ ಎನ್. ನಾಗರಾಜ್, ಸಿ.ಕೆ. ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಮನರಂಜನೆ ಕ್ರೀಡಾ ಸ್ಪರ್ಧೆ: ಅಖಿಲ ಕರ್ನಾಟಕ ಮಕ್ಕಳ ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಮನರಂಜನೆಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸುಮಾರು 200 ಮಕ್ಕಳು ಭಾಗವಹಿಸಿದ್ದರು. ಅವರಲ್ಲಿ 96 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಅಖಿಲ ಕರ್ನಾಟಕ ಮಕ್ಕಳ ಕೂಟದ ಗೌರವ ಉಪಾಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯಂ ಮಾತನಾಡಿ, `ಮಕ್ಕಳೇ ನಾಳೆಯ ನಾಗರಿಕರು. ಅವರಿಗೆ ನಮ್ಮ ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಬಗ್ಗೆ ಅರಿವು ಮೂಡಿಸಬೇಕು. ಆಗಲೇ ಅವರು ನಾಡಿನ ಸತ್ಪ್ರಜೆಗಳಾಗುತ್ತಾರೆ~ ಎಂದರು.

ಉದಯಭಾನು ಕಲಾ ಸಂಘ: ಉದಯಭಾನು ಕಲಾ ಸಂಘವು ಸಾಂಸ್ಕೃತಿಕ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿತು. ಸಂಘದ ಅಧ್ಯಕ್ಷ ಬಿ. ಕೃಷ್ಣ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಂದ್ರಿಕಾ ಗುರುರಾಜ್ ಅವರಿಂದ ದೇಶಭಕ್ತಿ ಗೀತೆಗಳು, ಹನುಮಯ್ಯ ಫಿಲಿಗೊಂಡ ಅವರಿಂದ ಸುಗಮ ಸಂಗೀತ, ನಿರಂಜನ ಹಿರೇಮಠ ಅವರಿಂದ ವಚನ ಗಾಯನ, ರೇವಂತ್ ಆರ್. ಮಾಳಿಗೆ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮಗಳು ನಡೆದವು.

ಯಶೋಧ ಮತ್ತು ತಂಡದಿಂದ ತೊಗಲು ಗೊಂಬೆ, ಹನುಮಂತ ಮತ್ತು ತಂಡದಿಂದ ಮೊಹರಂ ಕುಣಿತ, ಬಲರಾಮ್ ನಾಯಕ್ ತಂಡದಿಂದ ಪೂಜಾ ಕುಣಿತ, ಪ್ರಸನ್ನ, ಐಶ್ವರ್ಯ ಕಲಾನಿಕೇತನ ತಂಡದಿಂದ `ಶ್ರೀ ಕೃಷ್ಣ ಸಂಧಾನ~ ನಾಟಕ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.