ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅಸ್ತಿತ್ವ ಚೈತನ್ಯದ ಉತ್ಪನ್ನ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಎಲ್ಲ ಸೃಷ್ಟಿ ವಸ್ತುಗಳು ಭೌತಿಕತೆ ಹಾಗೂ ಪ್ರತಿಭೌತಿಕತೆಯಿಂದ ರೂಪುಗೊಂಡಿವೆ' ಎಂದು ಲೇಖಕ ಎಚ್. ವಿ. ಮೋಹನ್‌ಲಾಲ್ ಪ್ರತಿಪಾದಿಸಿದರು.

ನಗರದಲ್ಲಿ ಇತ್ತೀಚೆಗೆ ನಡೆದ `ಗ್ರಾವಿಟಿ ಕ್ಯಾಪ್ಚರ್ (ಗುರುತ್ವಾಕರ್ಷಣೆಯ ಆಕ್ರಮಣ)' ಕೃತಿ ಬಿಡುಗಡೆ ಸಮಾರಂಭ ದಲ್ಲಿ ಅವರು ಮಾತನಾಡಿ, `ಈ ಕೃತಿಯಲ್ಲಿ ನ್ಯೂಟನ್ ಹಾಗೂ ಐನ್‌ಸ್ಟೀನ್ ಅವರ ತತ್ವಗಳು ಸಂಯೋಜನೆಗೊಂಡಿರುವ ಗುರುತ್ವಾಕರ್ಷಣ ತತ್ವವನ್ನು ಪ್ರತಿಪಾದಿಸಿದ್ದೇನೆ' ಎಂದರು.

`ಗುರುತ್ವಾಕರ್ಷಣೆಯ ಮೂಲ ನೇರ ವಾಗಿ ಭೌತಿಕ ಹಾಗೂ ಪ್ರತಿ ಭೌತಿಕ ತತ್ವ ಗಳ ಜೊತೆಗೆ ಸಂಬಂಧ ಹೊಂದಿದೆ. ಭಾರತೀಯ ಹಾಗೂ ಚೀನಾ ತತ್ವಶಾಸ್ತ್ರಗಳು ಮಂಡಿಸಿರುವ ದ್ವಿಮುಖ ಸೂತ್ರದ ಪ್ರಕಾರ ವಿಶ್ವದಲ್ಲಿನ ಪ್ರತಿಯೊಂದು ಅಸ್ವಿತ್ವವು ಎರಡು ವಿರೋಧಿ ಶಕ್ತಿ ಅಥವಾ ಚೈತನ್ಯದ ಉತ್ಪನ್ನವಾಗಿದೆ' ಎಂದು ಅವರು ಹೇಳಿದರು.

ಸಂಗೀತ ಕಲಾವಿದ ವಿದ್ವಾನ್ ವಿಶ್ವನಾಥ್ ನಾಕೋಡ್ ಕೃತಿ ಬಿಡುಗಡೆ ಮಾಡಿ, `ಇದೊಂದು ಉತ್ತಮ ಕೃತಿ. ಗುರುತ್ವಾಕರ್ಷಣೆಯ ಸಿದ್ಧಾಂತದ ಮೇಲೆ ಇನ್ನಷ್ಟು ಬೆಳಕು ಚೆಲ್ಲಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT