ಬೆಂಗಳೂರು: ಹೋರ್ಡಿಂಗ್ ಮತ್ತು ಫ್ಲೆಕ್ಸ್ಗಳನ್ನು ತೆಗೆದು ಹಾಕುವಂತೆ ಹೈಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದರೂ ಕ್ರಮ ಕೈಗೊಳ್ಳದಿದ್ದ ಬಿಬಿಎಂಪಿ, ಚುನಾವಣಾ ಆಯೋಗದ ಒಂದೇ ಸೂಚನೆಗೆ ಮೈಕೊಡವಿ ಎದ್ದು, ಮೊದಲ ದಿನವೇ ಸಾವಿರಾರು ರಾಜಕೀಯ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದೆ.

ಬಿಬಿಎಂಪಿ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದ ಹೋರ್ಡಿಂಗ್, ಬ್ಯಾನರ್ ಮತ್ತು ಬಂಟಿಂಗ್ಗಳನ್ನು ಕೇಂದ್ರ ಕಚೇರಿ ಹಿಂಭಾಗದಲ್ಲಿ ರಾಶಿ, ರಾಶಿಯಾಗಿ ಬಿದ್ದಿದ್ದು, ಗುಡ್ಡದಂತೆ ಗೋಚರಿಸುತ್ತಿವೆ. ನಗರದ ಪ್ರತಿ ರಸ್ತೆಯಲ್ಲಿ ಹಾಕಲಾಗಿದ್ದ ಹೋರ್ಡಿಂಗ್ ಮತ್ತು ಬ್ಯಾನರ್ಗಳನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದು ಲಾರಿಗಳು ತೆರಪಿಲ್ಲದಂತೆ ಅವುಗಳ ರಾಶಿಯನ್ನು ತಂದು ಹಾಕುತ್ತಿವೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಕಳೆದ 48 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಹೋರ್ಡಿಂಗ್ಗಳನ್ನು ತೆರವುಗೊಳಿಸಲಾಗಿದೆ. ಕೃಷ್ಣ ಅವರು ಕಾಂಗ್ರೆಸ್ ಚುನಾವಣೆಗೆ ಸನ್ನದ್ಧವಾದ ಸಂಕೇತವಾಗಿ ಶಂಖ ಊದುವ ಚಿತ್ರಗಳೂ ಅದರಲ್ಲಿ ದೊಡ್ಡ ಪ್ರಮಾಣದಲ್ಲಿವೆ.

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಎಲ್ಲ ಹೋರ್ಡಿಂಗ್ಗಳನ್ನು ಶನಿವಾರದ ಒಳಗೆ ತೆರವುಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಗುರುವಾರ ಆದೇಶ ಹೊರಡಿಸಿದ್ದರು.
ಹೈಕೋರ್ಟ್ ಈ ಹಿಂದೆ 2012ರ ಅಕ್ಟೋಬರ್ 7, 2013ರ ಸೆಪ್ಟೆಂಬರ್ 24ರಂದು ಆದೇಶ ಹೊರಡಿಸಿತ್ತು. ಫ್ಲೆಕ್ಸ್ಗಳಿಂದ ವಾಹನ ಸವಾರರು ಪ್ರಾಣಾಪಾಯ ಎದುರಿಸುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿತ್ತು. ಆದರೆ, ಬಿಬಿಎಂಪಿ ಕಿವಿಗೆ ಹಾಕಿಕೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.