ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರಿಗಳಿಂದ ರಾ ದುರ್ಬಳಕೆ’

Last Updated 23 ಜುಲೈ 2014, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಹಲವು ಅಧಿಕಾರಿಗಳು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವನ್ನು(ರಾ) ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ‘ರಾ’ದ ನಿವೃತ್ತ ಅಧಿಕಾರಿ ಆರ್.ಕೆ.ಯಾದವ್‌ ಆರೋಪಿಸಿದರು.

ಮಾನಸ್‌ ಪಬ್ಲಿಕೇಷನ್ಸ್‌ ವತಿ­ಯಿಂದ ನಗರದ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಬುಧವಾರ ಏರ್ಪಡಿ­ಸಿದ್ದ ಆರ್‌.ಕೆ.­ಯಾದವ್‌ ಅವರ ‘ಮಿಷನ್‌ ಆರ್‌ ಅಂಡ್‌ ಎ.ಡಬ್ಲ್ಯೂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜೀವ್‌ಗಾಂಧಿ ಅವರ  ಹತ್ಯೆ­ಯಾದ ಸಂದರ್ಭದಲ್ಲಿ ಎಂ.ಕೆ.ನಾರಾ­ಯಣನ್‌ ಅವರು ಇಂಟೆಲಿಜೆನ್ಸ್ ಬ್ಯೂರೊ (ಐಬಿ) ನಿರ್ದೇಶಕರಾಗಿದ್ದರು. ಅಧಿಕಾರ ದುರ್ಬಳಕೆ ಸೇರಿದಂತೆ ಹಲವು ಆರೋಪಗಳಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳ­ಲಿಲ್ಲ. ಬದಲಿಗೆ ಅವರನ್ನು 2004ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ­ನ್ನಾಗಿ ನೇಮಕ ಮಾಡಲಾಯಿತು’ ಎಂದು ಹೇಳಿದರು.

‘1970ಕ್ಕೂ ಹಿಂದೆ ‘ರಾ’ ಅತ್ಯಂತ ಶಕ್ತಿಯುತವಾದ ಸಂಸ್ಥೆಯಾಗಿತ್ತು. ನಂತರದ ದಶಕಗಳಲ್ಲಿ  ‘ರಾ’ ದುರ್ಬಲ­­ವಾಗುತ್ತಾ ಸಾಗಿತು. ‘ರಾ’ ಕಾರ್ಯಾಚರಣೆಗೆ ಸರ್ಕಾರ ನೀಡಿದ್ದ ಅನುದಾನವನ್ನು ಸಹ ಹಲವು ಅಧಿಕಾರಿಗಳು ದುರ್ಬಳಕೆ ಮಾಡಿ­ಕೊಂಡಿದ್ದಾರೆ. ಇಂತಹ ಹಲವು ವಿಷಯಗಳನ್ನು ಕೃತಿಯಲ್ಲಿ ಪ್ರಸ್ತಾಪಿಸ­ಲಾಗಿದೆ’ ಎಂದರು.

ನಿವೃತ್ತ ಲೋಕಾಯುಕ್ತ ನ್ಯಾ. ಎನ್‌.ಸಂತೋಷ್‌ ಹೆಗ್ಡೆ ಮಾತನಾಡಿ, ‘ದೇಶದ ಭದ್ರತಾ ವ್ಯವಸ್ಥೆ ಅಧಿಕಾರಿಗಳಿಂದ ಹೇಗೆ ದುರ್ಬಳಕೆ ಆಗುತ್ತಿದೆ ಎಂಬುದು ಕೃತಿಯಿಂದ ತಿಳಿಯುತ್ತದೆ. ಇದೊಂದು ಉತ್ತಮ ಕೃತಿ’ ಎಂದರು.

ರಾಜಕೀಯ ಹಸ್ತಕ್ಷೇಪ ಬೇಡ: ನ್ಯಾ.ಹೆಗ್ಡೆ
‘ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾಯ­ಮೂರ್ತಿ ಮಾರ್ಕಂಡೇಯ ಕಟ್ಜು ಅವರ ಆರೋಪದಿಂದಾಗಿ ಮದ್ರಾಸ್‌ ಹೈಕೋರ್ಟ್‌ನ ಹೆಚ್ಚು­ವರಿ ನ್ಯಾಯಮೂರ್ತಿಗಳ ಸೇವಾ ಅವಧಿ ವಿಸ್ತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಿದೆ.

ನ್ಯಾಯಮೂರ್ತಿಗಳ ನೇಮಕ ವಿಷಯ  ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತ­ಕ್ಷೇಪ ಇರಬಾರದು’  ಎಂದು ಕಾರ್ಯಕ್ರಮದ ನಂತರ ಸಂತೋಷ್‌ ಹೆಗ್ಡೆ ಸುದ್ದಿಗಾರರಿಗೆ ತಿಳಿಸಿದರು.‘ನಗರದಲ್ಲಿ ಅತ್ಯಾಚಾರ ಪ್ರಕರಣ­ಗಳು ಹೆಚ್ಚುತ್ತಿವೆ. ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT