ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಕ್ಕೆ ಗಾಂಧಿ ಬಜಾರ್‌ ಕೊಡುಗೆ ಅಪಾರ’

Last Updated 20 ಡಿಸೆಂಬರ್ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯಿಕ ಪತ್ರಿಕೆ ‘ಗಾಂಧಿ ಬಜಾರ್’ ಅತ್ಯಲ್ಪ  ಪ್ರಸರಣ ಸಂಖ್ಯೆಯನ್ನು ಹೊಂದಿದ್ದರೂ ಮೌಲಿಕ ಲೇಖನಗಳ ಮೂಲಕ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದೆ. ಅದರ ಹಿಂದಿನ ಶಕ್ತಿಯಾದ ಕೆ.ಎನ್‌. ಬಾಲಕೃಷ್ಣ ಅವರಿಗೆ ಪ್ರಶಸ್ತಿ ಸಿಕ್ಕಿ­ರುವುದು ಖುಷಿ ತಂದಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಬೆಂಗ­ಳೂರು ವೃತ್ತದ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಹೇಳಿದರು.

ರೋಟರಿ ಬೆಂಗಳೂರು ಟೌನ್‌­ಟೌನ್‌ ಸಂಸ್ಥೆ ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಕಾಶಕ, ಬರಹಗಾರ ಬಾಲಕೃಷ್ಣ ಅವರಿಗೆ ‘ರೋಟರಿ ಪಯೊನಿಯರ್‌’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಶಸ್ತಿಯು ಸ್ಮರಣಿಕೆ ಹಾಗೂ ಸಮ್ಮಾನ ಪತ್ರವನ್ನು ಒಳಗೊಂಡಿದೆ.

‘ನನ್ನ ಸಾಧನೆ ಹಿಂದೆ ಹಲವರ ಕೊಡುಗೆ ಇದೆ. ಪ್ರಕಾಶನದ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇನೆ. ಮಾಡಿದ ಅಲ್ಪ ಕಾರ್ಯವನ್ನು ರೋಟರಿ ಸಂಸ್ಥೆ ಗುರುತಿಸಿರುವುದು ಸಂತಸ ತಂದಿದೆ’ ಎಂದು ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ತಿಳಿಸಿದರು.

ರೋಟರಿ ಜಿಲ್ಲಾ ಗವರ್ನರ್‌ ಎಂ. ಮಂಜುನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಬೆಂಗಳೂರು ಟೌನ್‌ಟೌನ್‌ ಸಂಸ್ಥೆಯ ಅಧ್ಯಕ್ಷ ಬಿ.ಎಸ್‌. ಶ್ರೀರಾಮ್‌, ಕಾರ್ಯದರ್ಶಿ ಕಲ್ಪನಾ ಶ್ರೀಲಲಿತಾ ಮತ್ತು ನಿರ್ದೇಶಕ ಸುರೇಶ್‌ ಟೋಟಾ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT