ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ₹1.18 ಕೋಟಿ ಮೌಲ್ಯದ ಗಾಂಜಾ ಜಪ್ತಿ

Published 23 ಆಗಸ್ಟ್ 2023, 15:59 IST
Last Updated 23 ಆಗಸ್ಟ್ 2023, 15:59 IST
ಅಕ್ಷರ ಗಾತ್ರ

ಬೀದರ್: ಅಕ್ರಮವಾಗಿ ಸಾಗಿಸುತ್ತಿದ್ದ ₹1.18 ಕೋಟಿ ಮೌಲ್ಯದ 118 ಕೆ.ಜಿ‌ ಗಾಂಜಾ ಹಾಗೂ ಅದನ್ನು ಸಾಗಿಸುತ್ತಿದ್ದ ₹8 ಲಕ್ಷ ಮೌಲ್ಯದ ಕಾರನ್ನು ಜಿಲ್ಲೆಯ ಪೊಲೀಸರು ಜಪ್ತಿ ಮಾಡಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಟೋಲ್ ಪ್ಲಾಜಾ ಬಳಿ ಮಂಗಳವಾರ ಕಾರು ನಿಲ್ಲಿಸುವಂತೆ ಪೊಲೀಸರು ಕೈಸನ್ನೆ ಮಾಡಿದಾಗ ಯೂಟರ್ನ್‌ ಮಾಡಿಕೊಂಡು ಹೋಗಿದ್ದಾರೆ. ಪೊಲೀಸರು ಬೆನ್ನಟ್ಟಿ ಹೋದಾಗ, ಮಾರ್ಗ ಮಧ್ಯದಲ್ಲಿ ಕಾರು ಬಿಟ್ಟು ಇಬ್ಬರು ಓಡಿ ಹೋಗಿದ್ದಾರೆ. ಫೈರಿಂಗ್‌ ಎಚ್ಚರಿಕೆ ಕೊಟ್ಟರೂ ನಿಲ್ಲಲಿಲ್ಲ. ಸ್ಥಳದಲ್ಲಿ ಜನ ಇದ್ದಿದ್ದರಿಂದ ಪೊಲೀಸರು ಫೈರಿಂಗ್‌ ಮಾಡಲಿಲ್ಲ. ತೆಲಂಗಾಣದಿಂದ ಮಹಾರಾಷ್ಟ್ರದ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಕಾರು ಕೂಡ ಮಹಾರಾಷ್ಟ್ರದ ಪಾಸಿಂಗ್ ಹೊಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಬುಧವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT